
ಆಹಾರ ಪದಾರ್ಥದಲ್ಲಿ ಪುರುಷರ ಗುಪ್ತಾಂಗದ ತುಂಡು ಪತ್ತೆ: ಬೆಚ್ಚಿಬಿದ್ದ ಮಹಿಳೆ
Wednesday, December 8, 2021
ಅಕ್ರಾ: ತಿನ್ನುವ ಆಹಾರ ಪದಾರ್ಥದಲ್ಲಿ ನೊಣ, ಜಿರಳೆ, ಹಲ್ಲಿ, ಇರುವೆ, ಇಲಿಮರಿ ಮುಂತಾದವುಗಳು ಪತ್ತೆಯಾಗುವುದು ಸರ್ವೇ ಸಾಮಾನ್ಯ. ಆದರೆ, ಪಶ್ಚಿಮ ಆಫ್ರಿಕಾದ ಘಾನಾ ದೇಶದಲ್ಲಿ ಆಹಾರದಲ್ಲಿ ದೊರಕಿರುವ ವಸ್ತು ಯಾವುದೆಂದು ಕೇಳಿದರೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಇದರಿಂದ ಹೊರಗಡೆ ಹೋಗುವ ಸಂದರ್ಭ ಏನಾದರೂ ತಿನ್ನುವುದಕ್ಕಿಂತ ಮೊದಲು ಆಹಾರ ಪದಾರ್ಥಗಳನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂಬುದನ್ನು ಈ ಘಟನೆ ಒತ್ತಿ ಹೇಳುತ್ತದೆ.
ಹಾಗಾದರೆ ಆಹಾರ ಪದಾರ್ಥದಲ್ಲಿ ಅಂತದ್ದೇನು ಇತ್ತು ಎಂದು ಗೊತ್ತೇ?. ಇಲ್ಲಿನ ಘಾನಾದ ಬೀದಿಬದಿ ವ್ಯಾಪಾರಸ್ಥರೊಬ್ಬರ ಬಳಿ ಊಟ ಖರೀದಿಸಿದ ಮಹಿಳೆಗೆ ಅಕ್ಷರಶಃ ಶಾಕ್ ಕಾದಿತ್ತು. ಏಕೆಂದರೆ, ಊಟದಲ್ಲಿ ಪುರುಷರ ಗುಪ್ತಾಂಗದ ರೀತಿಯ ವಸ್ತುವೊಂದು ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋವೊಂದನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ವಿಚಲಿತರಾಗಿದ್ದಾರೆ.
ತೌಝಾಫಿ ಎಂಬ ಹೆಸರಿನ ಮಹಿಳೆ ಆಹಾರ ಖಾದ್ಯವನ್ನು ಖರೀದಿಸಿದ್ದಳು. ಘಾನಾದಲ್ಲಿ ಧಾನ್ಯಗಳು ಮತ್ತು ಮಾಂಸವನ್ನು ಮಿಶ್ರಣ ಮಾಡಿರುವ ಪ್ರಧಾನ ಆಹಾರವನ್ನು ತಯಾರಿಸುತ್ತಾರೆ. ಬೀದಿಬದಿಯ ಅಂಗಡಿಗಳಲ್ಲಿ ಈ ಖಾದ್ಯ ಸುಲಭವಾಗಿ ದೊರೆಯುತ್ತದೆ. ಹೀಗಾಗಿ ಖಾದ್ಯವನ್ನು ಖರೀದಿಸಿದ ಮಹಿಳೆ ಮನೆಗೆ ಬಂದು ತೆರೆದಾಗ ಅದರಲ್ಲಿ ಮಾನವನ ಗುಪ್ತಾಂಗದ ರೀತಿಯ ವಸ್ತುವನ್ನು ಕಂಡು ಭಯಭೀತಳಾಗಿದ್ದಾಳೆ.
ಆಕೆ ಬೀದಿಬದಿ ಆಹಾರವನ್ನು ತಂದು ತಿನ್ನುವಾಗ ಬಹಳ ಎಚ್ಚರದಿಂದಿರಬೇಂದು ಮಹಿಳೆ ನೆಟ್ಟಿಗರನ್ನು ಎಚ್ಚರಿಸಿದ್ದಾರೆ. ವೈರಲ್ ಆಗಿರುವ ವೀಡಿಯೋಗೆ ಸಾಕಷ್ಟು ಕಾಮೆಂಟ್ಸ್ ಹರಿದುಬಂದಿದೆ. ನಿಜಕ್ಕೂ ಇದು ಆಘಾತಕಾರಿ ಸಂಗತಿ ಎಂದು ಅಭಿಪ್ರಾಯ ವ್ಯಕ್ತವಾಗಿವೆ. ಅಲ್ಲದೆ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿ ಎಂದು ನೆಟ್ಟಿಗರು ಮಹಿಳೆಯನ್ನು ಒತ್ತಾಯ ಮಾಡಿದ್ದಾರೆ.
ಇನ್ನು ಈ ರೀತಿಯ ಘಟನೆ ಘಾನಾದಲ್ಲಿ ಇದೇ ಮೊದಲೇನಲ್ಲ. 2016ರಲ್ಲಿ ಅಕೌಸಾ ಹೆಸರಿನ ಮಹಿಳೆಗೆ ಊಟದಲ್ಲಿ ಪುರುಷರ ಗುಪ್ತಾಂಗ ಮಾದರಿಯ ಮಾಂಸ ಪತ್ತೆಯಾಗಿತ್ತು. ಈ ಘಟನೆ ಘಾನಾ ರಾಜಧಾನಿ ಅಕ್ರಾದಲ್ಲಿ ನಡೆದಿತ್ತು. ತಕ್ಷಣ ಪೊಲೀಸರನ್ನು ಭೇಟಿ ಮಾಡಿದ್ದ ಅಕೌಸಾ, ಮಾಂಸದ ಡಿಎನ್ಎ ಪರೀಕ್ಷೆ ಮಾಡುವಂತೆ ಕೋರಿದ್ದಳು.