-->
ಐದರ ಬಾಲೆಯ ಅತ್ಯಾಚಾರ, ಕೊಲೆ: ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಅಪರಾಧಿ

ಐದರ ಬಾಲೆಯ ಅತ್ಯಾಚಾರ, ಕೊಲೆ: ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಅಪರಾಧಿ

ಗಾಂಧಿನಗರ (ಗುಜರಾತ್‌): ಐದು ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದಿರುವ 27 ವರ್ಷದ ಯುವಕನಿಗೆ ಗುಜರಾತ್‌ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಯುವಕ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ.

ಮಧ್ಯಪ್ರದೇಶ ರಾಜ್ಯದ ಅಪರಾಧಿ ಸುಜಿತ್‌ ಸಾಕೇತ್ ತನಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಪಿ.ಎಸ್‌.ಕಾಳ ಮೇಲೆ ಚಪ್ಪಲಿ ಎಸೆದಾತ. ಆದರೆ ಅದೃಷ್ಟವಶಾತ್‌ ಆತ ಎಸೆದಿರುವ ಚಪ್ಪಲಿಯು ಗುರಿತಪ್ಪಿ ಕಟಕಟೆ ಬಾಕ್ಸ್‌ನಲ್ಲಿ ಬಿದ್ದಿದೆ. 

ಅಪರಾಧಿ ಸುಜೀತ್ ಸಾಕೇತ್ ಕಳೆದ ಏಪ್ರಿಲ‌್ 30 ರಂದು ಐದು ವರ್ಷದ ವಲಸೆ ಕಾರ್ಮಿಕರ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ. ಈತ ಬಾಲಕಿಯ ಪಾಲಕರು ಕೆಲಸಕ್ಕೆಂದು ಹೋಗಿದ್ದಾಗ ಚಾಕೊಲೇಟ್‌ ಆಮಿಷವನ್ನೊಡ್ಡಿ ಬಾಲಕಿಯನ್ನು ಅಪಹರಿಸಿದ್ದ. ಬಳಿಕ ಯಾರೂ ಇಲ್ಲದ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್‌ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

Ads on article

Advertise in articles 1

advertising articles 2

Advertise under the article

holige copy 1.jpg