Job in Karur Vysya Bank-ಕರೂರ್ ವೈಶ್ಯ ಬ್ಯಾಂಕಿನಲ್ಲಿ ನೌಕರಿ: ಅಧಿಸೂಚನೆಯ ಮಾಹಿತಿ ಇಲ್ಲಿದೆ

ಕರೂರ್ ವೈಶ್ಯ ಬ್ಯಾಂಕಿನಲ್ಲಿ ನೌಕರಿ: ಅಧಿಸೂಚನೆಯ ಮಾಹಿತಿ ಇಲ್ಲಿದೆ





ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕರೂರ್ ವೈಶ್ಯ ಬ್ಯಾಂಕಿನಲ್ಲಿ ಉದ್ಯೋಗದ ಅವಕಾಶ ಒದಗಿಬಂದಿದೆ. ಬಿಸಿನೆಸ್ ಡೆವೆಲೆಪ್‌ಮೆಂಟ್ ಅಸೋಸಿಯೇಟ್ ಹುದ್ದೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.



ಅರ್ಜಿಯನ್ನು ಸಲ್ಲಿಸಲು ಡಿಸೆಂಬರ್ 31, 2021 ಕೊನೆ ದಿನವಾಗಿರುತ್ತದೆ.



ಶೈಕ್ಷಣಿಕ ಅರ್ಹತೆ:

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಯಾವುದೇ ಪದವಿಯನ್ನು ಶೆ. 50 ಅಂಕಗಳೊಂದಿಗೆ ಪಡೆದಿರಬೇಕು



ವಯೋಮಾನ:

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಕನಿಷ್ಟ 21 ಮತ್ತು ಗರಿಷ್ಟ 28 ವರ್ಷ ವಯಸ್ಸಾಗಿರಬೇಕು.



ಆಯ್ಕೆ ಪ್ರಕ್ರಿಯೆ:

ಮೊದಲು ಅರ್ಜಿ ಹಾಕಿದ ಅಭ್ಯರ್ಥಿಗಳ ಕಿರುಪಟ್ಟಿ (ಶಾರ್ಟ್ ಲಿಸ್ಟ್) ಮಾಡಲಾಗುತ್ತದೆ. ಅವರಿಗೆ ಲಿಖಿತ ಪರೀಕ್ಷೆ ಏರ್ಪಡಿಸಿ ಬಳಿಕ ಅರ್ಹರಿಗೆ ನೇರ ಸಂದರ್ಶನ ನಡೆಸಲಾಗುತ್ತದೆ.



ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ರೂ. 18000/- ವೇತನ ಪಡೆಯಲು ಅರ್ಹರಾಗುತ್ತಾರೆ. ಇದರ ಜೊತೆಗೆ ಅಧಿಸೂಚನೆ ಪ್ರಕಾರ ವಿವಿಧ ಭತ್ಯೆಗಳಿಗೆ ಅರ್ಹರಾಗುತ್ತಾರೆ.



ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಅಧಿಕೃತ ವೆಬ್‌ಸೈಟ್ https://www.kvb.co.in/ ಗೆ ಭೇಟಿ ನೀಡಿ, ಅಧಿಸೂಚನೆಯಲ್ಲಿ ಸೂಚಿಸಲಾಗಿರುವ ಅಗತ್ಯ ಮಾಹಿತಿಯನ್ನು ಅರ್ಜಿಯಲ್ಲಿ ದಾಖಲಿಸಿ ಸೂಕ್ತ ದಾಖಲೆಗಳನ್ನು ಲಗತ್ತಿಸುವ ಮೂಲಕ ಡಿಸೆಂಬರ್ 31,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.




BREAKING NEWS
Loading latest news...
Join our WhatsApp Channel Powered By : Online Pudu