-->

ಮಂಗಳೂರಿನಲ್ಲಿ ಇದೆಂಥ ಅಮಾನವೀಯ ಘಟನೆ- ಮೀನುಗಾರನನ್ನು ಉಲ್ಟಾ ನೇತು ಹಾಕಿ... ( Video)

ಮಂಗಳೂರಿನಲ್ಲಿ ಇದೆಂಥ ಅಮಾನವೀಯ ಘಟನೆ- ಮೀನುಗಾರನನ್ನು ಉಲ್ಟಾ ನೇತು ಹಾಕಿ... ( Video)


ಮಂಗಳೂರು; ಮಂಗಳೂರಿನಲ್ಲಿ ಮೀನುಗಾರನೋರ್ವನನ್ನು ಉಲ್ಟಾ ನೇತು ಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.  




ಮಂಗಳೂರಿನ ಧಕ್ಕೆಯಲ್ಲಿ ಈ ಘಟನೆ ನಡೆದಿದೆ.ಮೊಬೈಲ್ ಕದ್ದಿದ್ದಾನೆ ಎಂಬ ಆರೋಪ ಮಾಡಿ  ಆಂದ್ರಪ್ರದೇಶದ ಮೂಲದ ವೈಲ ಶೀನು (34) ಎಂಬಾತನಿಗೆ ಈ ರೀತಿ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ.

ವೈಲ ಶೀನು ಎಂಬಾತನ ಕಾಲಿಗೆ ಹಗ್ಗದಿಂದ ಕಟ್ಟಿ ಆತನನ್ನು ತಲೆಕೆಳಗು ಮಾಡಿ ನೇತು ಹಾಕಿ ಹಲ್ಲೆ ನಡೆಸಲಾಗಿದೆ. ಈ ವಿಡಿಯೋ ಪೊಲೀಸರ ಕೈಗೆ ಸಿಕ್ಕಿದ್ದು ಇವರೆಲ್ಲರೂ ಆಂಧ್ರಪ್ರದೇಶದ ಮೀನುಗಾರರು ಎಂದು ತಿಳಿದುಬಂದಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article