ಕೊಕ್ಕಡದಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ,‌ ಸ್ಕೂಟರ್ ರಕ್ಷಣೆ - VIDEO


ಮಂಗಳೂರು:  ಸ್ಕೂಟರ್​ನೊಂದಿಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಧರ್ಮಸ್ಥಳ ವಿಪತ್ತು ತಂಡದ ಸದಸ್ಯರು ರಕ್ಷಿಸಿದ ಘಟನೆ ಬೆಳ್ತಂಗಡಿ ತಾಲೂಕಿನ
ಕೊಕ್ಕಡ ಸಮೀಪದ ಪೆರಿಯಶಾಂತಿ ಎಂಬಲ್ಲಿ ನಡೆದಿದೆ.




ಬೆಳ್ತಂಗಡಿ ತಾಲೂಕಿನಾದ್ಯಂತ ನಿನ್ನೆಸುರಿದ ಭಾರಿ ಮಳೆಯ ಪರಿಣಾಮ ಕೆಲವು ರಸ್ತೆಗಳು ನೀರಿನಿಂದ ಜಲಾವೃತವಾಗಿತ್ತು. ಈ ಸಂದರ್ಭದಲ್ಲಿ ಕೊಕ್ಕಡ ಸಮೀಪದ ಪೆರಿಯಶಾಂತಿ ಎಂಬಲ್ಲಿ ಸ್ಕೂಟರ್ ಮೂಲಕ ನೀರು ತುಂಬಿದ ರಸ್ತೆಯಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿಯೊಬ್ಬರು ರಸ್ತೆ ದಾಟಲು ಪ್ರಯತ್ನಿಸಿದಾಗ ನೀರಿನ ರಭಸಕ್ಕೆ ಸ್ಕೂಟರ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ.




ಇದನ್ನು ಕಂಡ  ಬೆಳಾಲು ಉಜಿರೆ ಘಟಕದ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು,ಸ್ಕೂಟರ್ ಸವಾರ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿ, ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಕೂಟರ್ ಅ​ನ್ನು ಹಗ್ಗ ಕಟ್ಟಿ ಮೇಲೆ ಎತ್ತಿದ್ದಾರೆ.ಕಾರ್ಯಾಚರಣೆಯಲ್ಲಿ ಬೆಳಾಲು ಘಟಕದ ಸ್ವಯಂಸೇವಕರಾದ ಹರೀಶ್, ಯಶೋಧರ, ಸಂತೋಷ್, ರವೀಂದ್ರ ಸೇರಿದಂತೆ 6 ಮಂದಿ ಪಾಲ್ಗೊಂಡಿದ್ದರು. 




BREAKING NEWS
Loading latest news...
Join our WhatsApp Channel Powered By : Online Pudu