ಕೊಲ್ಕತ್ತಾ ಎಸ್ ಬಿಐ ಶಾಖೆಗೆ ಶಾರ್ಟ್ ಧರಿಸಿ ಬಂದ ಗ್ರಾಹಕನಿಗೆ ಒಳ ಬರಲು ಬಿಡದೆ ವಾಪಸ್ ಕಳಿಸಿದ ಸಿಬ್ಬಂದಿ

ಕೋಲ್ಕತಾ: ಕೋಲ್ಕತಾದ ಎಸ್ ಬಿಐ ಶಾಖೆಯೊಂದಕ್ಕೆ ಬಂದಿರುವ ಗ್ರಾಹಕನೊಬ್ಬ ಶಾರ್ಟ್ಸ್‌ ಧರಿಸಿ ಬಂದಿದ್ದಾನೆಂದು ಅಲ್ಲಿನ ಸಿಬ್ಬಂದಿ ಒಳಕ್ಕೆ ಬಿಡದ ಘಟನೆ ನಡೆದಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಆಶೀಶ್​ ಎಂಬವರು ಟ್ವಿಟರ್‌ನಲ್ಲಿ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ‘ನಾನು ಶಾರ್ಟ್ಸ್​ ಧರಿಸಿ ಎಸ್​ಬಿಐ ಬ್ಯಾಂಕ್​ ಶಾಖೆಗೆ ಹೋಗಿದ್ದೆ. ಆದರೆ ಸಿಬ್ಬಂದಿ ನನ್ನನ್ನು ಒಳ ಹೋಗಲು ಬಿಡಲಿಲ್ಲ. ನಮ್ಮ ಗ್ರಾಹಕರು ಶಿಸ್ತು ಪಾಲನೆ ಮಾಡಬೇಕೆಂಬುದು ನಮ್ಮ ಆಶಯ. ದಯವಿಟ್ಟು ವಾಪಸ್​ ಹೋಗಿ ಪ್ಯಾಂಟ್​ ಧರಿಸಿ ಬನ್ನಿ ಎಂದಿದ್ದಾರೆ’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ. 

ಈ ಬಗ್ಗೆ ಆಶೀಶ್ ಗ್ರಾಹಕರು ಏನು ಧರಿಸಬೇಕು? ಏನನ್ನು ಧರಿಸಬಾರದು ಎಂಬುದರ ಸಂಬಂಧ ಅಧಿಕೃತ ನೀತಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಟ್ವಿಟರ್‌ ಅನ್ನು ಅವರು ಎಸ್‌ಬಿಐಗೆ ಟ್ಯಾಗ್‌ ಮಾಡಿ ಈ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಎಸ್‌ಬಿಐ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು, ‘ನಿಮ್ಮ ಮಾತುಗಳನ್ನು ನಾವು ಗೌರವಿಸುತ್ತೇವೆ. ನಮ್ಮ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಯಾವುದೇ ವಸ್ತ್ರ ಸಂಹಿತೆಯನ್ನು ನಾವು ಜಾರಿ ಮಾಡಿಲ್ಲ. ಈ ಬಗ್ಗೆ ನಾವು ಯಾವುದೇ ಅಧಿಕೃತ ನೀತಿಯ ಪ್ರಕಟಣೆಯನ್ನೂ ಮಾಡಿಲ್ಲ. ಅವರವರ ಆಯ್ಕೆಗೆ ತಕ್ಕಂತೆ, ಸ್ಥಳೀಯವಾಗಿ ಇರುವ ಕೆಲವು ನಿಯಮಾನುಸಾರ ಬಟ್ಟೆ ಧರಿಸಬಹುದು. ದಯವಿಟ್ಟು, ನಮ್ಮ ಬ್ಯಾಂಕ್​​ನ ಯಾವ ಶಾಖೆಯಲ್ಲಿ ಹೀಗಾಯಿತು? ಅದರ ಕೋಡ್​​ ಕೊಡಿ. ನಾವು ವಿಚಾರಿಸುತ್ತೇವೆ’ ಎಂದು ಹೇಳಿದೆ.

ಆದರೆ ಇದನ್ನು ಮುಂದುವರೆಸಲು ಇಚ್ಚಿಸದ ಆಶೀಶ್‌ ‘2017ರಲ್ಲಿ ಕೂಡ ಪುಣೆಯಲ್ಲಿ ಬರ್ಮುಡಾ ಧರಿಸಿ ಬಂದಿರುವ ವ್ಯಕ್ತಿಯೋರ್ವರಿಗೆ ಇದೇ ರೀತಿಯ ಅನುಭವವಾಗಿತ್ತು. ಅದಕ್ಕಾಗಿ ವಸ್ತ್ರಸಂಹಿತೆ ಇದೆಯೇ ಎಂದು ಪ್ರಶ್ನಿಸಿದ್ದೆ. ಇಲ್ಲ ಎಂಬ ಉತ್ತರ ಸಿಕ್ಕಿದೆ. ಆದ್ದರಿಂದ ಈ ವಿಚಾರವನ್ನು ನಾನು ಮುಂದುವರಿಸಲು ಇಚ್ಛಿಸುವುದಿಲ್ಲ. ಇಲ್ಲಿಗೇ ಮುಗಿಸುತ್ತೇನೆ’ ಎಂದಿದ್ದಾರೆ. 

ಆದರೆ ಈ ಟ್ವಿಟ್‌ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ತಮಾಷೆ ಎನಿಸುವ ಕಮೆಂಟ್‌ಗಳನ್ನೂ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಟ್ಟೆ ಧರಿಸಿಬನ್ನಿ, ಅದು ಏನಾದರೂ ಓಕೆ, ಹಾಗೆಯೇ ಬರಬೇಡಿ ಎಂದು ಹಲವರು ತಮಾಷೆಯ ಕಮೆಂಟ್‌ ಮಾಡಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu