-->

ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್, ರಾಜೀವ್ ಶುಕ್ಲಾ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಗ್ಯಾಂಗ್ ಸ್ಟರ್ ಪತ್ನಿ‌

ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್, ರಾಜೀವ್ ಶುಕ್ಲಾ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಗ್ಯಾಂಗ್ ಸ್ಟರ್ ಪತ್ನಿ‌

ಮುಂಬೈ: ಭಾರತದ ಕ್ರಿಕೆಟ್ ತಂಡದ ಆಟಗಾರರಾದ ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್, ಐಪಿಎಲ್ ನ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ಸೇರಿದಂತೆ ಹಲವಾರು ಪ್ರಸಿದ್ಧರ ವಿರುದ್ಧ ಗ್ಯಾಂಗ್ ಸ್ಟರ್ ರಿಯಾಝ್ ಭಟ್ ಪತ್ನಿ ಅತ್ಯಾಚಾರದ ಆರೋಪ ಹೊರಿಸಿದ್ದಾರೆ.

ತಮ್ಮ ಉದ್ಯಮ ಪಾಲುದಾರರು ಹಾಗೂ ಇತರ ಗಣ್ಯರೊಡನೆ ದೈಹಿಕ ಸಂಪರ್ಕ ಹೊಂದಲು ತನ್ನ ಪತಿ ಒತ್ತಾಯಿಸಿದ್ದ ಎಂದು ದಾವೂದ್ ಇಬ್ರಾಹೀಂ ಆಪ್ತ ಗ್ಯಾಂಗ್ ಸ್ಟರ್ ರಿಯಾಝ್ ಭಾಟಿ ಪತ್ನಿ ರೆಹನುಮಾ ಭಾಟಿ ಆರೋಪಿಸಿದ್ದಾರೆ. ಮುಂಬೈಯ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು ಕ್ರಿಕೆಟಿಗರಾದ ಮುನಾಫ್ ಪಟೇಲ್ ಹಾರ್ದಿಕ್ ಪಾಂಡ್ಯ, ರಾಜೀವ್ ಶುಕ್ಲಾ ಹಾಗೂ ರಾಜಕಾರಣಿ ಪೃಥ್ವಿರಾಜ್ ಕೊಠಾರಿ ಹೆಸರನ್ನು ಉಲ್ಲೇಖಿಸಿದ್ದಾರೆ. ಆದರೆ ಪಾಂಡ್ಯ, ಪಟೇಲ್, ಶುಕ್ಲಾ ಮತ್ತು ಕೊಠಾರಿಯವರು ಎಲ್ಲಿ, ಯಾವಾಗ ಅತ್ಯಾಚಾರ ಮಾಡಿದ್ದರೆಂದು ಆಕೆ ಉಲ್ಲೇಖಿಸಿಲ್ಲ. ಘಟನೆ ನಡೆದ ನಿರ್ದಿಷ್ಟ ದಿನಾಂಕವನ್ನು ತಿಳಿದಿಲ್ಲ.

“ತಾನು ಎಫ್‌ಐಆರ್ ದಾಖಲಿಸಲು ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ನಾನು ಪೊಲೀಸರಿಗೆ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ವಿವಿಧ ಹಂತದ ಪೊಲೀಸ್ ಅಧಿಕಾರಿಗಳನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಆದರೆ ಅವರು ಹಣಕ್ಕಾಗಿ ಭೇಟಿ ಇಟ್ಟಿದ್ದಾರೆ. ಆದರೆ ನಾನೇಕೆ ಭ್ರಷ್ಟಾಚಾರವನ್ನು ಮಾಡಲಿ? ನಾನು ಸರಿಯಾಗಿದ್ದೇನೆ. ಅವರೇ ಅಪರಾಧಿಗಳು” ಎಂದು ರೆಹನುಮಾ ಹೇಳಿಕೆಯನ್ನು ದಿ ಪ್ರಿಂಟ್ ವರದಿ ಮಾಡಿದೆ.

ರಿಯಾಝ್ ಭಟ್ ತನ್ನನ್ನು ಅಪರಿಚಿತರೊಂದಿಗೂ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡುತ್ತಿದ್ದ. ತನ್ನನ್ನು ವೇಶ್ಯೆಯಾಗಿ ಬಳಸಿಕೊಂಡಿದ್ದಾನೆ. ತನ್ನೊಂದಿಗೆ ಬಲವಂತವಾಗಿ ನಡೆಸಿ ಕೊಂಡವರಲ್ಲಿ ಹಾರ್ದಿಕ್ ಪಾಂಡ್ಯ ಕೂಡಾ ಒಬ್ಬ. ಕೃತ್ಯ ನಡೆಸಿದ ಸಂದರ್ಭದಲ್ಲಿ ಪಾಂಡ್ಯ ಮದ್ಯಪಾನ ಮಾಡಿದ್ದನ್ನು ರೆಹನುಮಾ ಉಲ್ಲೇಖಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article