ನೆಲ್ಯಾಡಿ: ಅಪ್ರಾಪ್ತೆಯನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಬೆಳೆಸಿದ ಆಟೊ ಚಾಲಕ; ಆಕೆಯ ಖಾಸಗಿ ದೃಶ್ಯಗಳನ್ನು ಇರಿಸಿಕೊಂಡು ನಿರಂತರ ದುಷ್ಕೃತ್ಯ

ಮಂಗಳೂರು: ಅಪ್ರಾಪ್ತೆಯನ್ನು ಬೆದರಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿರುವ ಆಟೋ ಚಾಲಕನೋರ್ವ ಆಕೆಯ ನಗ್ನಚಿತ್ರವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಪದೇ ಪದೇ ದುಷ್ಕೃತ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ಈ ರೀತಿಯ ಕೃತ್ಯ ನಡೆದಿದೆ. ಆಟೋ ಚಾಲಕ ನೌಫಲ್ ಎಂಬಾತ ಕೃತ್ಯ ಎಸಗಿರುವ ಆರೋಪಿ. ಈತ ಮೂರು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ.

ಬಳಿಕ ಆಕೆಯ ಮೊಬೈಲ್​ ನಂಬರ್​ ಅನ್ನು ಪಡೆದು ಮಾತನಾಡುತ್ತಾ ಸಲಿಗೆ ಬೆಳೆಸಿದ್ದಾನೆ‌. ಬಳಿಕ ಆಕೆಯನ್ನು ಪುಸಲಾಯಿಸಿ ಕರೆದೊಯ್ದು ಬೆದರಿಸಿ ಬಲವಂತವಾಗಿ ಲೈಂಗಿಕ ಸಂಪರ್ಕವನ್ನು ಬೆಳೆಸಿದ್ದಾನೆ. ಅಲ್ಲದೆ ಸಂತ್ರಸ್ತೆಯೊಂದಿಗೆ ಕಳೆದ ಖಾಸಗಿ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಪದೇ ಪದೆ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಆತನಿಂದ ದೂರವಿರಲು ಬಾಲಕಿ ಪ್ರಯತ್ನಿಸಿದರೂ, ಆಕೆಯ ಖಾಸಗಿ ದೃಶ್ಯಗಳನ್ನು ತೋರಿಸಿ ಬೆದರಿಸಿ ಮತ್ತೆ ಮತ್ತೆ ಕರೆಸಿಕೊಂಡು ಲೈಂಗಿಕ ಸಂಪರ್ಕ ಬೆಳೆಸಿ ಹಿಂಸೆ ನೀಡಿದ್ದಾನೆ.

ಈತನ ಹಿಂಸೆಯನ್ನು ಸಹಿಸಲಾಗದೆ ತನ್ನ ಪೋಷಕರ ಬಳಿ ತಾನು ಅನುಭವಿಸುತ್ತಿರುವ ನರಕಯಾತನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ತಕ್ಷಣ ಅವರು ಧರ್ಮಸ್ಥಳ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಕ್ಸೋ ಕಾಯ್ದೆಯಡಿ ಆರೋಪಿ ನೌಫಲ್ ವಿರುದ್ಧ ಪ್ರಕರಣ ದಾಖಲಾಗಿದೆ. 

BREAKING NEWS
Loading latest news...
Join our WhatsApp Channel Powered By : Online Pudu