-->
ಪ್ರೀತಿಯ ಮನದನ್ನೆ ನಟಿ ಪತ್ರಲೇಖಾರನ್ನು ಶಿಳ್ಳೆ ಹೊಡೆದು ಮದುವೆ ಮಂಟಪಕ್ಕೆ ಸ್ವಾಗತಿಸಿದ 'ರಾಜಕುಮಾರ'

ಪ್ರೀತಿಯ ಮನದನ್ನೆ ನಟಿ ಪತ್ರಲೇಖಾರನ್ನು ಶಿಳ್ಳೆ ಹೊಡೆದು ಮದುವೆ ಮಂಟಪಕ್ಕೆ ಸ್ವಾಗತಿಸಿದ 'ರಾಜಕುಮಾರ'

ಮುಂಬೈ: ಬಹುಕಾಲದಿಂದ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಅವರು  ಪ್ರಿಯತಮೆ ಪತ್ರಲೇಖಾರನ್ನು ವಿವಾಹವಾಗಿದ್ದಾರೆ. ಇದೀಗ ಅವರು ತಮ್ಮ ವಿವಾಹ ಸಮಾರಂಭದ ಕೆಲವು ರಸಮಯ ಕ್ಷಣಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 

ಇದನ್ನು ರಾಜ್ ಕುಮಾರ್ ರಾವ್ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ‘ನಮ್ಮ ಜೀವನದ ಅತ್ಯಂತ ಸುಂದರ ಕ್ಷಣಗಳ ಕೆಲವೊಂದು ದೃಶ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ’ ಎಂದು​ ಬರೆದಿದ್ದಾರೆ. 

ಹಲವು ಆಫ್​ ಬೀಟ್​ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿರುವ ರಾಜ್​ಕುಮಾರ್​ ರಾವ್​ ಹಾಗೂ ನಟಿ ಪತ್ರಲೇಖಾ 11 ವರ್ಷಗಳಿಂದ ಜೊತೆಯಾಗಿದ್ದು, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರ, ಆಪ್ತರ ಸಮ್ಮುಖದಲ್ಲಿ ನಡೆದ ಮದುವೆ ಶಾಸ್ತ್ರಗಳಲ್ಲಿ ಅವರಿಬ್ಬರ ಕೆಮಿಸ್ಟ್ರಿ ಯಾವ ಸಿನಿಮಾ ದೃಶ್ಯಗಳಿಗೂ ಕಡಿಮೆ ಇಲ್ಲದಂತೆ ಇತ್ತು.     

ಪತ್ರಲೇಖಾ ಮದುವೆ ಮಂಟಪಕ್ಕೆ ಬರುವ ಸಂದರ್ಭದಲ್ಲಿ ರಾಜ್ ಕುಮಾರ್ ರಾವ್​​ ಶಿಳ್ಳೆ ಹೊಡೆದು ಸ್ವಾಗತಿಸುವುದನ್ನೂ, ನವವಧುವಿಗೆ ಸಿಂಧೂರ ಹಾಕುವ ಶಾಸ್ತ್ರದ ನಂತರ ತಮ್ಮ ಹಣೆಗೂ ಸಿಂಧೂರ ಹಚ್ಚಿಸಿಕೊಳ್ಳುವುದನ್ನೂ ವೀಡಿಯೋದಲ್ಲಿ ಕಾಣಬಹುದು.

Ads on article

Advertise in articles 1

advertising articles 2

Advertise under the article