-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಬಸ್ ಜಾಹಿರಾತಿನಲ್ಲಿದ್ದ ಅಪ್ಪು ಫೋಟೊವನ್ನು ನೋಡಿ ಕಂಬನಿ ಸುರಿಸಿ ಮುತ್ತಿಟ್ಟು, ಸೆರಗಿನಿಂದ ಫೋಟೋ ಮೇಲಿನ ಧೂಳು ಒರೆಸಿದ ಅಜ್ಜಿ: ವೀಡಿಯೋ ವೈರಲ್

ಬಸ್ ಜಾಹಿರಾತಿನಲ್ಲಿದ್ದ ಅಪ್ಪು ಫೋಟೊವನ್ನು ನೋಡಿ ಕಂಬನಿ ಸುರಿಸಿ ಮುತ್ತಿಟ್ಟು, ಸೆರಗಿನಿಂದ ಫೋಟೋ ಮೇಲಿನ ಧೂಳು ಒರೆಸಿದ ಅಜ್ಜಿ: ವೀಡಿಯೋ ವೈರಲ್

ಕೊಪ್ಪಳ: 'ದೊಡ್ಮನೆ ಹುಡುಗ' ‌ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನ ಅಭಿಮಾನಿಗಳಲ್ಲಿ ಹೇಳತೀರದ ನೋವನ್ನುಂಟು ಮಾಡಿದೆ. ಪರಿಣಾಮ ಕೆಲ ಮಂದಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡುವೆ ಕೆಲವರು ಪುನೀತ್ ರಾಜ್‍ಕುಮಾರ್ ರಂತೆ ನೇತ್ರದಾನಕ್ಕೆ ಮನ ಮಾಡಿದವರೂ ಇದ್ದಾರೆ. ಇದೆಲ್ಲವೂ ಅವರ ಮೇಲಿನ ಅಭಿಮಾನದ ದ್ಯೋತಕವೇ ಹೊರತು ಮತ್ತೇನಲ್ಲ.

ಇದೀಗ ವಯೋವೃದ್ಧೆಯೋರ್ವರು ವಿಚಿತ್ರವಾಗಿ ತಮ್ಮ ಅಭಿಮಾನವನ್ನು, ಪುನೀತ್ ಮರಣಕ್ಕೆ ನೋವನ್ನು ವ್ಯಕ್ತಪಡಿಸಿದ್ದು, ಇದರ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ‌‌. ಈ ಅಜ್ಜಿಯು ಸಾರಿಗೆ ಬಸ್ ನ ಮೇಲೆರುವ ಜಾಹಿರಾತಿನಲ್ಲಿದ್ದ ಪುನೀತ್ ರಾಜ್​ಕುಮಾರ್​ ಫೋಟೊವನ್ನು ಸ್ಪರ್ಶಿಸಿ, ಮುತ್ತಿಟ್ಟು, ಸೆರಗಿನಿಂದ ಅಪ್ಪು ಮುಖ ಸವರಿದ ವೀಡಿಯೋ ಸಖತ್​ ವೈರಲ್ ಆಗುತ್ತಿದೆ.

ಈ ಘಟನೆ ನಡೆದಿರೋದು ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ. ಇಲ್ಲಿ‌ ನಿಂತಿರುವ ಸಾರಿಗೆ ಸಂಚಾರಿ ನಿಗಮದ ಬಸ್ ಮೇಲೆ ಜಾಹೀರಾತಿನಲ್ಲಿ ಪುನೀತ್ ರಾಜ್​ಕುಮಾರ್​ರವರ ಫೋಟೋ ನೋಡಿ ಭಾವುಕರಾದ ಅಜ್ಜಿ, ಆ ಫೋಟೋಗೆ ಮುತ್ತಿಟ್ಟು, ಅದರ ಮೇಲೆ ಕೆಲಹೊತ್ತು ತನ್ನ ತಲೆ ಇಟ್ಟು ನಮಿಸಿದ್ದಾರೆ. ಬಳಿಕ ಅಪ್ಪು ಫೋಟೋ ಮೇಲಿದ್ದ ದೂಳನ್ನು ತನ್ನ ಸೆರಗಿನಿಂದ ಸ್ವಚ್ಛಗೊಳಿಸಿದ್ದಾರೆ. 

ಈ ದೃಶ್ಯವನ್ನು ಯಾರೋ ದೂರದಿಂದ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಯೋವೃದ್ಧೆ ನೊಂದು ಅಪ್ಪು ಫೋಟೋವನ್ನು ಸೆರಗಿನಿಂದ ಸ್ವಚ್ಚ ಮಾಡುತ್ತಿರುವ ದೃಶ್ಯವನ್ನು ನೋಡಿದರೆ ಮನಕಲಕುತ್ತೆ.‌ ಹೃದಯ ಬಹಳ ಭಾರ ಅನ್ನಿಸುತ್ತದೆ‌. ಈ ಪ್ರೀತಿ, ಅಭಿಮಾನವನ್ನು ವರ್ಣಿಸುವುದಕ್ಕೆ ಪದಗಳೇ ಸಿಗುತ್ತಿಲ್ಲ.


Ads on article

Advertise in articles 1

advertising articles 2

Advertise under the article