-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ: ಆಕೆಯ ಪತಿಗೆ ರೆಡ್​​​ಹ್ಯಾಂಡ್​​ ಆಗಿ ಸಿಕ್ಕಿಬಿದ್ದ ಸಬ್‌ಇನ್ಸ್​​ಪೆಕ್ಟರ್​​ ಸಸ್ಪೆಂಡ್‌

ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ: ಆಕೆಯ ಪತಿಗೆ ರೆಡ್​​​ಹ್ಯಾಂಡ್​​ ಆಗಿ ಸಿಕ್ಕಿಬಿದ್ದ ಸಬ್‌ಇನ್ಸ್​​ಪೆಕ್ಟರ್​​ ಸಸ್ಪೆಂಡ್‌

ವಾರಂಗಲ್​​(ಆಂಧ್ರಪ್ರದೇಶ): ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿರುವ ಗಂಭೀರ ಆರೋಪದ ಮೇಲೆ ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್​​​ಇನ್ಸ್​​ಪೆಕ್ಟರ್​​​ ಶೇಕ್​​ ಶಾಫಿ ಅಮಾನತುಗೊಂಡಿದ್ದಾರೆ.

ನವೆಂಬರ್​​​​ 18ರಂದು ವಿವಾಹಿತೆಯೊಂದಿಗೆ ಆಕೆಯ ಮನೆಯಲ್ಲಿ ಎಸ್​ಐ ಶೇಕ್ ಶಾಫಿ ಆಕೆಯ ಪತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಈ ವೇಳೆ ಸಬ್​​ ಇನ್ ಸ್ಪೆಕ್ಟರ್ ಗೆ ಆಕೆಯ ಪತಿ ಹಾಗೂ ಇತರರು ಸೇರಿ ಸರಿಯಾಗಿ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗಿತ್ತು. ಇದಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. 

ಶೇಕ್ ಶಫಿ, ಪೆಬ್ಬೇರ್​​ನಲ್ಲಿ ಎಸ್​ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಹಿಳೆ ಜೊತೆ ಸಂಪರ್ಕ ಹೊಂದಿದ್ದ. ಇದಾದ ಬಳಿಕ ನಿರಂತರವಾಗಿ ಆಕೆಯೊಂದಿಗೆ ಫೋನ್​​ನಲ್ಲಿ ಸಂಪರ್ಕ ಹೊಂದಿದ್ದ.

ಆ ಬಳಿಕ ಸಲಿಗೆ ಬೆಳೆಸಿಕೊಂಡ ಎಸ್ಐ ಶೇಕ್ ಶಫಿ ಮಹಿಳೆಯ ಪತಿ ಕೆಲಸಕ್ಕೆ ಹೋದ ಬಳಿಕ ಆಕೆಯ ಮನೆಗೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದ. ಈ ಬಗ್ಗೆ ಎಸ್‌ಐ​ಗೆ ಸ್ಥಳೀಯರು ಎಚ್ಚರಿಕೆಯನ್ನು ನೀಡಿದ್ದರು. ಆದರೆ ಆತ ತನ್ನ ಚಾಳಿಯನ್ನು ಮುಂದುವರಿಸಿದ್ದ. ಇದರ ಬೆನ್ನಲ್ಲೇ ಈ ವಿಚಾರ ಆಕೆಯ ಪತಿಗೆ ಗೊತ್ತಾಗಿದೆ. ನವೆಂಬರ್​​ 18ರಂದು ತಾನು ಊರಿನಿಂದ ಹೊರಗೆ ಹೋಗುತ್ತಿರುವುದಾಗಿ ಪತ್ನಿಗೆ ತಿಳಿಸಿದ್ದಾನೆ. ಅದರಂತೆ ಮನೆಯಿಂದ ಹೊರಗಡೆ ಹೋಗುತ್ತಿದ್ದಂತೆ ಪೊಲೀಸ್​ ಸಬ್​ಇನ್ಸ್​​ಪೆಕ್ಟರ್​​ ಅಲ್ಲಿಗೆ ಬಂದಿದ್ದಾನೆ. ಆದರೆ, ಈ ವೇಳೆ ಅಲ್ಲಿಯೇ ಇದ್ದು ಎಸ್ಐ ಬರುವುದನ್ನೇ ಕಾದಿದ್ದ ಪತಿ ಆತನನ್ನು ರೆಡ್​​ಹ್ಯಾಂಡ್​​ ಆಗಿ ಹಿಡಿದಿದ್ದಾನೆ. ಜೊತೆಗೆ, ಈ ಬಗ್ಗೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ಮಹಿಳೆಯ ಪತಿ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡುತ್ತಿದ್ದಂತೆ ನವೆಂಬರ್​ 19ರಂದು ಎಸ್ಐ ಶೇಕ್ ಶಫಿಯನ್ನು ಪೊಲೀಸ್ ಇಲಾಖೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದ್ದು, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article

ಸುರ