-->
ಪ್ರಿಯಾಂಕಾ ಚೋಪ್ರಾ ದಾಂಪತ್ಯದಲ್ಲಿ ಬಿರುಕು?: ಒಂದೇ ವೀಡಿಯೋ, ಕಾಮೆಂಟ್ ನಲ್ಲಿ ಅನುಮಾನ ಪರಿಹರಿಸಿದ ಪಿಗ್ಗಿ

ಪ್ರಿಯಾಂಕಾ ಚೋಪ್ರಾ ದಾಂಪತ್ಯದಲ್ಲಿ ಬಿರುಕು?: ಒಂದೇ ವೀಡಿಯೋ, ಕಾಮೆಂಟ್ ನಲ್ಲಿ ಅನುಮಾನ ಪರಿಹರಿಸಿದ ಪಿಗ್ಗಿ

ನವದೆಹಲಿ: ಗ್ಲೋಬಲ್ ಐಕಾನ್ ನಟಿ ಪ್ರಿಯಾಂಕಾ ಚೋಪ್ರಾ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬುದು ಭಾರೀ ಸದ್ದು ಮಾಡುತ್ತಿದೆ. ಈ ಮೂಲಕ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪಾಪ್ ಸಿಂಗರ್ ನಿಕ್ ಜೊನಾಸ್ ಇಂದು ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ.

ಪಿಗ್ಗಿ - ನಿಕ್ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬ ಚರ್ಚೆ ಎದ್ದಿರುವುದಕ್ಕೆ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದ ಖಾತೆಯೇ ಕಾರಣ​. ಪ್ರಿಯಾಂಕಾ ಅಮೆರಿಕಾದ ಗಾಯಕ ನಿಕ್​ ಜೋನಸ್​ ರನ್ನು ವಿವಾಹವಾದ ಬಳಿಕ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯ ಹೆಸರನ್ನು ‘ಪ್ರಿಯಾಂಕಾ ಚೋಪ್ರಾ ಜೋನಸ್​’ ಎಂದು ಬದಲಾಯಿಸಿಕೊಂಡಿದ್ದರು. ಆದರೆ ಈಗ ಪತಿ ನಿಕ್ ಜೋನಸ್ ಅವರ ಸರ್​ನೇಮ್​ ‘ಜೋನಸ್​’ ಹೆಸರನ್ನು ಕೈ ಬಿಟ್ಟಿದ್ದಾರೆ. ಮೊದಲಿನಂತೆ ಕೇವಲ ‘ಪ್ರಿಯಾಂಕಾ ಚೋಪ್ರಾ’ ಎಂದಷ್ಟೇ ಇಟ್ಟುಕೊಂಡಿದ್ದಾರೆ. ಆದ್ದರಿಂದ ಈ ಜೋಡಿಯ ನಡುವೆ ಬಿರುಕು ಮೂಡಿದೆ ಎಂಬ ಗುಮಾನಿ ಎದ್ದಿದೆ. 

ಶೀಘ್ರವೇ ಈ ತಾರಾಜೋಡಿ ಕೂಡಾ ವಿಚ್ಛೇದನ  ಪಡೆಯಬಹುದು ಎಂದು ಕೂಡ ಅನೇಕರು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಆ ಎಲ್ಲಾ ಗಾಳಿ ಸುದ್ದಿಗಳಿಗೆ ಪರೋಕ್ಷವಾಗಿ ಪ್ರಿಯಾಂಕಾ ಚೋಪ್ರಾ ಉತ್ತರ ನೀಡಿದ್ದಾರೆ. 


ಇಂದು ಪ್ರಿಯಾಂಕಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ನಿಕ್​ ಜೋಸನ್​ ವೀಡಿಯೋವೊಂದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಇದರಲ್ಲಿ ನಿಕ್ ಜೋನಸ್ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರಿಯಾಂಕಾ ‘Damn! I just died in your arms’ ಎಂದು ಕಮೆಂಟ್​ ಮಾಡಿದ್ದಾರೆ. ಈ ಮೂಲಕ ಪತಿಯ ಬೈಸಿಪ್ ವೀಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಆ ಮೂಲಕ ತಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

ಆದರೆ ದಿಢೀರ್ ಎಂದು ಪ್ರಿಯಾಂಕಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪತಿಯ ಸರ್​ನೇಮ್​ ತೆಗೆದು ಹಾಕಿದ್ದು ಯಾಕೆ ಎಂಬುದಕ್ಕೆ ಸದ್ಯಕ್ಕಂತೂ ಉತ್ತರ ಸಿಕ್ಕಿಲ್ಲ. ಈಗಾಗಲೇ ವಿಚ್ಛೇದನದ ಗಾಸಿಪ್​ ಜೋರಾಗಿ ಹಬ್ಬಿದೆ. ಆದರೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ಗಾಳಿ ಸುದ್ದಿ ಹಬ್ಬಿಸಬಾರದು ಎಂದು ಅವರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article