ಪ್ರಿಯತಮೆಯ ನಗ್ನ ಫೋಟೊವನ್ನು ವಾಟ್ಸ್ಆ್ಯಪ್ ಸ್ಟೇಟಸ್ ಗೆ ಅಪ್ಲೋಡ್ ಮಾಡಿದ ಪ್ರಿಯಕರ: ಸಂಚಿಗೆ ಬಲಿಯಾದಾಕೆಯಿಂದ ದೂರು ದಾಖಲು

ಹುಬ್ಬಳ್ಳಿ: ವಿವಾಹವಾಗುವುದಾಗಿ ನಂಬಿಸಿ ಯುವಕನೋರ್ವ ತನ್ನ ಪ್ರೇಯಸಿಯ ಬೆತ್ತಲೆ ವೀಡಿಯೋ ಸೆರೆಹಿಡಿದು, ಫೋಟೋ ಎಡಿಟ್​ ಮಾಡಿ, ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿ ವಿಕೃತಿ ಮೆರೆದಿರುವ ಆತಂಕಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿ ಶುಭಂ ಕೌಲೆ ಈ ರೀತಿಯ ದುಷ್ಕೃತ್ಯ ಎಸಗಿದಾತ‌. ಈತನ ಕೃತ್ಯದಿಂದ ಮನನೊಂದ ವಿದ್ಯಾರ್ಥಿನಿ ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. 

ಆರೋಪಿ ಶುಭಂ ಕೌಲೆ ತನ್ನದೇ ಕಾಲೇಜಿನ 20 ವರ್ಷದ ಕಿರಿಯ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಆಕೆಯ ಜತೆ ವಾಟ್ಸ್​ಆ್ಯಪ್​ ಚಾಟ್ ಮಾಡುತ್ತಾ ಇನ್ನಷ್ಟು ಹತ್ತಿರವಾಗಿದ್ದಾನೆ. ದಿನ ಕಳೆದಂತೆ ಇವರ ಪರಿಚಯ ಪ್ರೀತಿಗೆ ತಿರುಗಿದೆ. ಆ ಬಳಿಕ‌ ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿ, ಸಲುಗೆ ಬೆಳೆಸಿಕೊಂಡಿದ್ದಾನೆ. 

ಅದೇ ಸಲುಗೆಯಲ್ಲಿ ವಾಟ್ಸ್​ಆ್ಯಪ್​ನಲ್ಲೇ ಯುವತಿಯ ನಗ್ನ ವೀಡಿಯೋವನ್ನು ಚಿತ್ರೀಕರಣ ಮಾಡುವ ಬಯಕೆ ವ್ಯಕ್ತಪಡಿಸಿದ್ದಾನೆ. ಶುಭಂ ಕೌಲೆಯನ್ನು ಸಂಪೂರ್ಣ ನಂಬಿದ್ದ ಯುವತಿ, ಹಿಂದೆ ಮುಂದೆ ನೋಡದೆ ಮೊಬೈಲ್​ ಮುಂದೆ ಬೆತ್ತಲಾಗಿದ್ದಾಳೆ. ಅದನ್ನು ಆರೋಪಿ ಸ್ಕ್ರೀನ್ ರೇರ್ಕಾಂಡಿಗ್ ಮಾಡಿದ್ದಾನೆ. ಇದಾದ ಬಳಿಕ ತನ್ನ ವರಸೆ ಬದಲಿಸಿದ ಶುಭಂ ಕೌಲೆ, ಯುವತಿಯ ನಗ್ನ ವೀಡಿಯೋದ ಫೋಟೋ ತೆಗೆದು ಎಡಿಟ್​ ಮಾಡಿ ತನ್ನ ಸ್ಟೇಟಸ್​ಗೆ ಹಾಕಿ ವಿಕೃತಿ ಮೆರೆದಿದ್ದಾನೆ.

 ಈ ಮೂಲಕ ಯುವತಿಯ ಖಾಸಗಿತನಕ್ಕೆ ಧಕ್ಕೆ ಉಂಟುಮಾಡಿದ್ದಾನೆ. ಆರೋಪಿ‌ ಶುಭಂ ಕೌಲೆ ಬಣ್ಣದ ಮಾತುಗಳಿಗೆ ಮರುಳಾಗಿ ಇದೀಗ ಪ್ರಿಯಕರನ ಕರಾಳ ಮುಖ ಅನಾವರಣಗೊಂಡಿದೆ. ಇದರಿಂದ ತೀವ್ರ ಮನನೊಂದಿರುವ ಸಂತ್ರಸ್ತ ಯುವತಿ, ಹುಬ್ಬಳ್ಳಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu