ಶಾಲೆಗೆ ಹೋಗಿದ್ದ ಬಾಲಕಿ ನಿವೃತ್ತ ಮುಖ್ಯ ಶಿಕ್ಷಕರ ಬಾವಿಯಲ್ಲಿ ಮೃತದೇಹವಾಗಿ ಪತ್ತೆ

ಮಾಗಡಿ: ಶಾಲೆಗೆ ಹೋಗಿದ್ದ ಬಾಲಕಿಯೋರ್ವಳು ನಿವೃತ್ತ ಮುಖ್ಯ ಶಿಕ್ಷಕರೊಬ್ಬರ ತೋಟದ ಬಾವಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾಳೆ. ಇದೀಗ ಈಕೆಯ ಸಾವು ಬಹಳಷ್ಟು ಸುತ್ತ ಅನುಮಾನಗಳಿಗೆ ಎಡೆ ಮಾಡಿದೆ. 

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಅಗಲಕೋಟೆ ಹ್ಯಾಂಡ್​ಪೋಸ್ಟ್​ ಬಳಿಯ ತಿಟ್ಟಮೇಗಲ ಪಾಳ್ಯದ ಯಶೋದಮ್ಮ ಎಂಬಾಕೆಯ ಪುತ್ರಿ ಲಕ್ಷ್ಮಿ(14) ಮೃತ ಬಾಲಕಿ.

ಸಾತನೂರು ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಲಕ್ಷ್ಮೀ, ಸೋಮವಾರ ಬೆಳಗ್ಗೆ ಶಾಲೆಗೆ ಹೋದವಳು ಮತ್ತೆ ಮರಳಿ ಮನೆಗೆ ವಾಪಸಾಗಿರಲಿಲ್ಲ. ಇದರಿಂದ ಗಾಬರಿಗೊಂಡ ತಾಯಿ ಯಶೋದಮ್ಮ, ಮಗಳಿಗಾಗಿ ಗ್ರಾಮದಲ್ಲಿ ಹುಡುಕಿದ್ದಾರೆ. ಆದರೆ ಆಕೆ ಎಲ್ಲೂ ಪತ್ತೆಯಾಗಿರಲಿಲ್ಲ. ಬಳಿಕ ಅವರು ಮಾಗಡಿ ಠಾಣೆಗೆ ದೂರು ನೀಡಿದ್ದರು. 

ಆದರೆ ಇಂದು ಮಧ್ಯಾಹ್ನ 3 ಗಂಟೆಗೆ ಗ್ರಾಮದಿಂದ 1 ಕಿ.ಮೀ. ದೂರದ ದೊಣಕುಪ್ಪೆ ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ಗಂಗರಾಯಿ ಎಂಬುವವರ ತೋಟದ ಬಾವಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.‌ ಇದೀಗ ಆಕೆಯ ಸಾವು ಸಾಕ ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಮೃತ ಲಕ್ಷ್ಮಿ ತಾಯಿ ಯಶೋದಮ್ಮ ನಾಗೇಶ ಎಂಬಾತನ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದ್ದಾರೆ.

ಹಲವು ತಿಂಗಳ ಹಿಂದೆ ನಾಗೇಶ್ ಎಂಬಾತ ಬಾಲಕಿಯನ್ನು ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ. ಈತ ಲಕ್ಷ್ಮಿಯನ್ನು ಹಿಂಸೆ ಕೊಟ್ಟು ಬಾವಿಗೆ ತಳ್ಳಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu