-->
ಕಡಬ: ಕಡ್ಯ ಕೊಣಾಜೆ ಪ್ರದೇಶದಲ್ಲಿ ಹಾಡಹಗಲೇ ಕಾಡಾನೆಯ ಹಿಂಡು ಮನೆಯ ಅಂಗಳದ ತೋಟಕ್ಕೆ ಲಗ್ಗೆ

ಕಡಬ: ಕಡ್ಯ ಕೊಣಾಜೆ ಪ್ರದೇಶದಲ್ಲಿ ಹಾಡಹಗಲೇ ಕಾಡಾನೆಯ ಹಿಂಡು ಮನೆಯ ಅಂಗಳದ ತೋಟಕ್ಕೆ ಲಗ್ಗೆ

ಸುಬ್ರಹ್ಮಣ್ಯ: ಹಾಡಹಗಲೇ ಕಾಡಾನೆಯ ಹಿಂಡು ಮನೆಯ ಅಂಗಳದ ತೋಟಕ್ಕೆ ಲಗ್ಗೆ ಇಟ್ಟು ಜನರನ್ನು ಭೀತಿಗೊಳಿಸುತ್ತಿರುವ ಘಟನೆ ಕಡಬ ತಾಲೂಕಿನ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಕಡ್ಯ ಪ್ರದೇಶದಲ್ಲಿ ಕಾಡಾನೆ ರಾತ್ರಿ ಮಾತ್ರವಲ್ಲದೆ ಹಾಡ ಹಗಲಲ್ಲೂ ತೋಟಕ್ಕೆ ನುಗ್ಗಿ ಕೃಷಿ ನಾಶ ಪಡಿಸುತ್ತಿದೆ‌. ಈ ಬಗ್ಗೆ ಅರಣ್ಯ ಇಲಾಖೆಗೆ ದೂರುಗಳು ಬರುತ್ತಿವೆ.

ರವಿಪ್ರಸಾದ್ ಭಟ್ ಗುಜ್ಜಲ, ನರಸಿಂಹ ಭಟ್ ಪೆರಡೆ, ಮಧುಸೂದನ್ ಭಟ್ ಕಡ್ಯ, ನಾಗರಾಜ್ ಭಟ್ ಕಡ್ಯ, ರವೀಂದ್ರ ಬತ್ತಿಲ್ ಹಾಗೂ ಇತರರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ನೂರಾರು ಅಡಿಕೆ ಗಿಡ, ಬಾಳೆ, ಇತರೆ ಕೃಷಿಗಳನ್ನು ನಾಶ ಪಡಿಸಿದೆ.

Ads on article

Advertise in articles 1

advertising articles 2

Advertise under the article