-->
Bantwala: ಕೆರೆಗೆ ಬಿದ್ದು ವೈದ್ಯೆ ಮೃತ್ಯು ಪ್ರಕರಣ; ನಿರ್ಲಕ್ಷ್ಯ ಆರೋಪದ ಮೇಲೆ ಫಾರ್ಮ್ ಹೌಸ್ ಮಾಲಕರ ವಿರುದ್ಧ ಪ್ರಕರಣ ದಾಖಲು

Bantwala: ಕೆರೆಗೆ ಬಿದ್ದು ವೈದ್ಯೆ ಮೃತ್ಯು ಪ್ರಕರಣ; ನಿರ್ಲಕ್ಷ್ಯ ಆರೋಪದ ಮೇಲೆ ಫಾರ್ಮ್ ಹೌಸ್ ಮಾಲಕರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ: ಕೃಷಿ ಅಧ್ಯಯನಕ್ಕೆಂದು ಬಂದಿದ್ದ ಯುವ ವೈದ್ಯೆಯೋರ್ವಳು ಕೆರೆಗೆ ಬಿದ್ದು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರೆಗೆ ತಡೆಗೋಡೆ, ಬೇಲಿಯನ್ನು ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವ ಆರೋಪದ ಮೇಲೆ ಫಾರ್ಮ್​ನ ಮಾಲಕರ ಮೇಲೆಯೇ ಪ್ರಕರಣ ದಾಖಲಾಗಿದೆ. 

ಮಂಗಳೂರಿನಲ್ಲಿ ವೈದ್ಯೆಯಾಗಿದ್ದ ಮೈಝಿ ಕರೋಲ್ ಫರ್ನಾಂಡೀಸ್ ಎಂಬವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ವಾರಣಾಸಿ ಫಾರ್ಮ್​ ಹೌಸ್ ಗೆ ಕೃಷಿ ಅಧ್ಯಯಕ್ಕೆಂದು ಆಗಮಿಸಿದ್ದರು.‌ ಅಲ್ಲಿ ಅವರು ಸೆ.12 ರಂದು ಕೆರೆಗೆ ಬಿದ್ದು ಮೃತಪಟ್ಟಿದ್ದರು. ಪ್ರಕರಣದಲ್ಲಿ ಈ ಮುನ್ನ ಈಜು ತರಬೇತುದಾರರ ನಿರ್ಲಕ್ಷ್ಯ ಎಂದು ದೂರು ದಾಖಲಾಗಿತ್ತು. 

ಇದೀಗ ವಾರಣಾಸಿ ಫಾರ್ಮ್​ಹೌಸ್ ನ ಪಾರ್ಥ ವಾರಣಾಸಿ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆರೆಗೆ ತಡೆಗೋಡೆ, ಬೇಲಿಯನ್ನು ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವುದೇ ಮೈಝಿ ಕರೋಲ್ ಫರ್ನಾಂಡೀಸ್ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಟ್ಲ ಠಾಣೆಯಲ್ಲಿ ಪಾರ್ಥ ವಾರಣಾಸಿ ವಿರುದ್ಧ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article