
ಬಂಟ್ವಾಳ: ಕಂಟೈನರ್ ಲಾರಿ - ಬೈಕ್ ನಡುವೆ ಅಪಘಾತ; ಸವಾರ ಮೃತ್ಯು
11/01/2021 06:54:00 AM
ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ರಾ.ಹೆ.75ರ ಮೆಲ್ಕಾರಿನಲ್ಲಿ ಕಂಟೈನರ್ ಹಾಗೂ ಬೈಕ್ ನಡುವೆ ನಡೆದಿರುವ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಮೃತಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.
ನಗರದ ಇರಾ ಪಂಜಾಜೆ ನಿವಾಸಿ ತಿಲಕ್(29) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.
ತಿಲಕ್ ಅವರು ಮೆಲ್ಕಾರ್ ನಲ್ಲಿ ಹೋಗುತ್ತಿದ್ದ ಸಂದರ್ಭ ಅವರ ಬೈಕ್ ಗೆ ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ತಿಲಕ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.