
ವಿಜಯಪುರ: 70 ವೃದ್ಧನಿಂದ ಅಪ್ರಾಪ್ತೆಯ ಅತ್ಯಾಚಾರ; ಆರೋಪಿ ಅಂದರ್
Thursday, November 25, 2021
ವಿಜಯಪುರ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ. ಇದೀಗ 70 ವರ್ಷದ ವೃದ್ಧನೊಬ್ಬ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿಯಲ್ಲಿ ನಡೆದಿದೆ.
ಹಿರೇರೂಗಿಯ ಚಂದ್ರಾಮ ಬಾಬುರಾಯ ಬಗದೂರಗಿ (70) ಬಂಧಿತ ಆರೋಪಿ.
ವಯೋವೃದ್ಧ ಕಾಮುಕ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಬಾಲಕಿಗೆ ರಕ್ತಸ್ರಾವಗೊಂಡು ಆರೋಗ್ಯದಲ್ಲಿ ಏರುಪೇರು ಕಂಡಿದೆ. ಬಾಲಕಿಯನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವೃದ್ಧನನ್ನು ಬಂಧಿಸಿರುವ ಇಂಡಿ ಗ್ರಾಮೀಣ ಠಾಣೆಯ ಪೊಲೀಸರು, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.