
ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಈ ಸಿರಿವಂತನ ಕಾಮಪುರಾಣ ಬಯಲು: ಈತ 5ಸಾವಿರ ಮಹಿಳೆಯರೊಂದಿಗೆ ಲೈಂಗಿಕಕ್ರಿಯೆ ನಡೆಸಿದ ಭೂಪ
Tuesday, November 23, 2021
ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್ ನಿವಾಸಿಯಾಗಿರುವ ಮೈಕೆಲ್ ಗೊಗೂನ್ ವಿಶ್ವದ ಸಿರಿವಂತರಲ್ಲೋರ್ವ. ಆದರೆ ಈತನ ಕಾಮಪುರಾಣವನ್ನು ಕೆದಕಿದಲ್ಲಿ ಭಯಾನಕ ಎನ್ನುವಷ್ಟು ಸತ್ಯಗಳು ಹೊರಕ್ಕೆ ಬರುತ್ತಿದೆ. ಇದರ ತನಿಖೆಗೆ ಹೋದ ಪೊಲೀಸರೇ ಇದೀಗ ಶಾಕ್ ಆಗಿದ್ದಾರೆ.
57 ವರ್ಷದ ಈ ಕೋಟ್ಯಾಧಿಪತಿ ಮೈಕೆಲ್ ಗೊಗೂನ್ ಎಂಬಾತ ಸಿಕ್ವೊಯಾ ಕ್ಯಾಪಿಟಲ್‌ನ ಪಾಲುದಾರ. ಈತ ಐದು ಸಾವಿರಕ್ಕೂ ಅಧಿಕ ಮಂದಿ ಮಂದಿಯ ಮಹಿಳೆಯರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾನಂತೆ. ಈ ಕುರಿತು ಆತ ತನ್ನ ಕಂಪ್ಯೂಟರ್ ನಲ್ಲಿರುವ ಎಕ್ಸ್‌ಎಲ್ ಷೀಟ್‌ನಲ್ಲಿ ಎಲ್ಲರ ವಿವರಗಳನ್ನೂ ಬರೆದಿಟ್ಟುಕೊಂಡಿದ್ದಾನೆ. ತಾನು ಯಾರ್ಯಾರ ಜೊತೆಯಲ್ಲಿ ಮಲಗಿದ್ದೇನೆಂಬ ಸಂಪೂರ್ಣ ವಿವರ ಈ ದಾಖಲೆಯಲ್ಲಿದೆಯಂತೆ.
ಅಷ್ಟಕ್ಕೂ ಈ ಶ್ರೀಮಂತನ ಭಯಾನಕ ಕಾಮಪುರಾಣ ಪೊಲೀಸರಿಗೆ ತಿಳಿದದ್ದು, ಆತನ ವಿರುದ್ಧ ಮೂವರು ಮಹಿಳೆಯರು ಅತ್ಯಾಚಾರ ದೂರು ದಾಖಲು ಮಾಡಿದ ಮೇಲೆ. ಈ ಮೂವರೂ 135 ಪುಟಗಳ ದೂರು ಸಲ್ಲಿಸಿ, 800 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಪರಿಹಾರ ಕೋರಿದ್ದಾರೆ. ಗೊಗೂನ್ ತಮ್ಮ ಜೊತೆಯಲ್ಲಿ ವಿಕೃತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಮಾತ್ರವಲ್ಲದೇ ಹಲವಾರು ಮಹಿಳೆಯರನ್ನು ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದಾನೆ. ಲೈಂಗಿಕ ಕ್ರಿಯೆಯ ಬಳಿಕ ಯಾರಲ್ಲಿಯೂ ವಿಚಾರ ತಿಳಿಸಬಾರದು ಎನ್ನುವ ಕಾರಣಕ್ಕೆ ಭಾರಿ ಉಡುಗೊರೆಗಳನ್ನು ನೀಡುತ್ತಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರಿಗೆ ಆತನ ಐಷಾರಾಮಿ ಬಂಗಲೆಯಲ್ಲಿ ಅವನೇ ಬರೆದಿಟ್ಟಿರುವ ದಾಖಲೆಗಳು ದೊರಕಿವೆ. ಅದರಲ್ಲಿ ಐದು ಸಾವಿರಕ್ಕೂ ಅಧಿಕ ಹೆಂಗಸರ ವಿವರವಿದ್ದು, ತಾನು ಹೇಗೆ ಅವರ ಜತೆ ಲೈಂಗಿಕ ಕ್ರಿಯೆ ನಡೆಸಿದೆ ಎಂಬುದನ್ನು ಕೂಡಾ ಉಲ್ಲೇಖಿಸದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಬಂಗಲೆಯಲ್ಲಿಯೇ ಒಂದು ಬಾರ್ ನಿರ್ಮಿಸಿರುವ ಈ ಕಾಮುಕ ಅದರಲ್ಲಿಯೇ ‘ಬೂಮ್ ಬೂಮ್’ ಎಂಬ ಕೊಠಡಿ ನಿರ್ಮಿಸಿದ್ದಾನೆ. ಅಲ್ಲಿಗೆ ಮಹಿಳೆಯರನ್ನು ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ. ತನ್ನ ವಿರುದ್ಧ ದೂರು ದಾಖಲಿಸಿದಲ್ಲಿ, ಅವರನ್ನು ಹತ್ಯೆ ಮಾಡುವಂತೆ ತನ್ನ ಭದ್ರತಾ ಸಿಬ್ಬಂದಿಗೆ ಈತ ಆದೇಶಿಸುತ್ತಿದ್ದ ಎಂಬ ಅಂಶವೂ ತನಿಖೆಯಿಂದ ತಿಳಿದುಬಂದಿದೆ.
ಅಷ್ಟಕ್ಕೂ ಈತ ಅಂತಿಂಥ ಸಾಮಾನ್ಯ ವ್ಯಕ್ತಿಯಲ್ಲ. ಈತನ ಮಾಲೀಕತ್ವದ ಭದ್ರತಾ ಸಂಸ್ಥೆಯಾಗಿರುವ ಆಮೀಟರ್ ಗ್ರೂಪ್ ಆ್ಯಪ್ಪಲ್, ಸಿಸ್ಕೋ, ಗೂಗಲ್, ಯೂಟ್ಯೂಬ್, ಪೇಪಾಲ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಉನ್ನತ ಸಂಸ್ಥೆಗಳಿಗೆ ಹಣಕಾಸಿನ ಸಹಕಾರ ಮಾಡಿದೆ. ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡುವ ತಂತ್ರಗಳ ಸಾಧನೆ ಮಾಡುವವರ ಪಟ್ಟಿಯಲ್ಲಿ ಈತನ ಹೆಸರು ಸದಾ ಟಾಪರ್ ಲಿಸ್ಟ್‌ನಲ್ಲಿ ಕೂಡ ಇರುತ್ತದೆ. ವಿಶ್ವದ ಸಿರಿವಂತನ ಪಟ್ಟಿಯಲ್ಲಿಯೂ ಈತನ ಹೆಸರು ಸದಾ ಮುಂದಿರುತ್ತದೆ.