-->
ಬರೋಬ್ಬರಿ 463 ರೂ. ಟಿಕೆಟ್ ಪಾವತಿಸಿ ಬಸ್ ಪ್ರಯಾಣ ಮಾಡಿದ ಕೋಳಿ: ಸಖತ್ ವೈರಲ್ ಆಗುತ್ತಿದೆ ಈ ಕೋಳಿ‌ ಫೋಟೊ

ಬರೋಬ್ಬರಿ 463 ರೂ. ಟಿಕೆಟ್ ಪಾವತಿಸಿ ಬಸ್ ಪ್ರಯಾಣ ಮಾಡಿದ ಕೋಳಿ: ಸಖತ್ ವೈರಲ್ ಆಗುತ್ತಿದೆ ಈ ಕೋಳಿ‌ ಫೋಟೊ

ಕೊಪ್ಪಳ: ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಕರೆದೊಯ್ಯುವುದನ್ನು ನಾವು ಎಲ್ಲೆಡೆ ನಾವು ಕಾಣುತ್ತಿರುತ್ತೇವೆ. ಆದರೆ ಬಸ್ ನಲ್ಲಿ ಪಕ್ಷಿ ಪ್ರಾಣಿಗಳನ್ನು ತಮ್ಮ ಜೊತೆ ಬಸ್​ನಲ್ಲಿ ಕೊಂಡೊಯ್ದು, ಟಿಕೆಟ್​ ತೆಗೆದುಕೊಳ್ಳೋಕೆ ಹಿಂದು-ಮುಂದು ನೋಡುವುದನ್ನು, ಇದೇ ವಿಚಾರಕ್ಕೆ ಕಂಡಕ್ಟರ್​ ಜತೆ ವಾಗ್ವಾದ ನಡೆಸುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ತಮ್ಮ ಕೋಳಿಯ ಪ್ರಯಾಣಕ್ಕೆ ಬರೋಬ್ಬರಿ 463 ರೂ.ನ್ನು ಟಿಕೆಟ್​ ತೆತ್ತಿದ್ದಾರೆ.

ಹೌದು, ಸೋಮವಾರ ಹೈದರಾಬಾದ್​ನಿಂದ ಗಂಗಾವತಿಗೆ ಪ್ರಯಾಣಿಕರೊಬ್ಬರು ಪ್ರಯಾಣಿಸಿದ್ದಾರೆ‌. ಹೀಗೆ ಬರುವಾಗ ಅವರು ತಮ್ಮೊಡನೆ ಕೋಳಿಯೊಂದನ್ನೂ ತಂದಿದ್ದರು. ಸಾರಿಗೆ ನಿಯಮಗಳ ಪ್ರಕಾರ ಪಕ್ಷಿಗಳ ಸಾಗಾಟಕ್ಕೆ ಅರ್ಧ ಟಿಕೆಟ್​ ಪಡೆದುಕೊಳ್ಳಬೇಕು. ಆದ್ದರಿಂದಲೇ ಬಹುಪಾಲು ಜನರು ಕೋಳಿ ಮತ್ತಿತರ ಪಕ್ಷಿಗಳನ್ನು ಬಚ್ಚಿಟ್ಟು ಬಸ್ ಪ್ರಯಾಣ ಮಾಡುವುದುಂಟು. ಗೊತ್ತಾದರೆ ಕೆಲವರು ಪಕ್ಷಿಗಳಿಗೆ ಟಿಕೆಟ್​ ಯಾಕೆಂದು ತಗಾದೆ ತೆಗೆಯುವುದನ್ನು ನಾವು ಕಾಣುತ್ತಿರುತ್ತೇವೆ.

ಆದರೆ, ಕೋಳಿ ಮೇಲಿನ ಪ್ರೀತಿಗೆ ಅದರ ಮಾಲಕರ ಬರೋಬ್ಬರಿ 463 ರೂ. ಟಿಕೆಟ್ ಪಾವತಿಸಿ  ಪ್ರಯಾಣಿಸಿದ್ದಾರೆ. ಈ ಟಿಕೆಟ್​ ದರಕ್ಕೆ ಗಂಗಾವತಿಯಲ್ಲೇ ಒಂದು ಕೋಳಿ ಕೊಳ್ಳಬಹುದೆಂದು ಬಸ್ ನಿರ್ವಾಹಕ ಪ್ರಯಾಣಿಕನಿಗೆ ನಗುತ್ತಲೇ ಹೇಳಿದ್ದಾರಂತೆ. ಬಸ್​ನಲ್ಲಿದ್ದವರೂ ಕೋಳಿ ಮತ್ತು ಅದರ ಮಾಲಕನನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಕೋಳಿಯ ಫೋಟೋವನ್ನೂ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article