ಮಂಗಳೂರು;100 ರೂಪಾಯಿ ತೆಗೆದುಕೊಂಡು ಹೋದ 28 ವರ್ಷದ ಯುವತಿ ನಾಪತ್ತೆ





ಮಂಗಳೂರು; ‌ಮನೆ ಸಾಮಾನು ತರುವೆನೆಂದು 100 ರೂಪಾಯಿ ತೆಗೆದುಕೊಂಡು ಮನೆಯಿಂದ ಹೋದ 28 ವರ್ಷದ ಯುವತಿ ನಾಪತ್ತೆಯಾದ ಘಟನೆ ಬಂಟ್ವಾಳ ದಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ 28 ವರ್ಷದ ಯುವತಿ ಜ್ಯೋತಿ ನಾಪತ್ತೆಯಾದವರು.  ಇವರು ನವೆಂಬರ್ 17 ರಂದು ಬೆಳಿಗ್ಗೆ 10 ಗಂಟೆಗೆ ಮನೆ ಬಿಟ್ಟು ಹೋದವರು ಮನೆಗೆ ಮರಳಿ ಬಂದಿಲ್ಲ. 

ಇವರು ತಮ್ಮ ತಾಯಿಯಲ್ಲಿ  ಮನೆ ಸಾಮಾನು ತರಲು ಅಂಗಡಿಗೆ ಹೋಗುತ್ತೇನೆಂದು  ರೂ 100 ಪಡೆದುಕೊಂಡು ಮನೆಯಿಂದ ಹೋಗಿದ್ದಾರೆ. ಆದರೆ ಮನೆಯಿಂದ ಹೋದ ಯುವತಿ ಮರಳಿ ಮನೆಗೆ ಬಂದಿಲ್ಲ.

 ಆಕೆಯ ಮೊಬೈಲ್ ಗೆ ಕರೆ ಮಾಡಿದರೆ ಸ್ವಿಚ್ ಆಫ್ ಬರುತ್ತಿದೆ.  ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೆ ಇರುವುದರಿಂದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ.