-->
ಮಂಗಳೂರಿನ ಅಲ್ಪಸಂಖ್ಯಾತ ಕಚೇರಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ - ವಾಟ್ಸಪ್ ನಲ್ಲಿ ನಗ್ನ ಚಿತ್ರ ಕಳುಹಿಸಲು ಕೋರಿದ್ದ ಜಿಲ್ಲಾ ವ್ಯವಸ್ಥಾಪಕ ಅರೆಸ್ಟ್!

ಮಂಗಳೂರಿನ ಅಲ್ಪಸಂಖ್ಯಾತ ಕಚೇರಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ - ವಾಟ್ಸಪ್ ನಲ್ಲಿ ನಗ್ನ ಚಿತ್ರ ಕಳುಹಿಸಲು ಕೋರಿದ್ದ ಜಿಲ್ಲಾ ವ್ಯವಸ್ಥಾಪಕ ಅರೆಸ್ಟ್!

ಮಂಗಳೂರು: ಮಂಗಳೂರಿನಲ್ಲಿರುವ   ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜಿಲ್ಲಾ ವ್ಯವಸ್ಥಾಪಕ ಮೊಹಮ್ಮದ್ ಫಾರೂಕ್ (45) ನನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ‌

ಈತ ಕಚೇರಿಯಲ್ಲಿ ಕೆಲಸಕ್ಕಿದ್ದ 19 ವರ್ಷದ ಯುವತಿಗೆ   ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ  ಮತ್ತು ವಾಟ್ಸಪ್ ನಲ್ಲಿ ನಗ್ನ ಚಿತ್ರಗಳನ್ನು ಕಳುಹಿಸಲು ಒತ್ತಾಯ ಪಡಿಸುತ್ತಿದ್ದ. 

ಆಕೆಗೆ ನಗ್ನ ಚಿತ್ರವನ್ನು ಕಳುಹಿಸುವಂತೆ  ಒತ್ತಾಯಿಸುತ್ತಿದ್ದ ಈತನ ಬೇಡಿಕೆಗೆ ಯುವತಿ ಸೊಪ್ಪು ಹಾಕದೆ ಆತನಿಂದ ದೂರವಿದ್ದಳು.

 ಈ ನಡುವೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕೆಯ ಮೈಗೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದು ಇದರಿಂದ ಯುವತಿ ಕೆಲಸವನ್ನೇ ಬಿಟ್ಟು ತೆರಳಿದ್ದಳು.  ಬಳಿಕ ಆಕೆ ಅಧಿಕಾರಿ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

ದೂರು ದಾಖಲಾದ ಬಳಿಕ ಪೊಲೀಸರು ಅಧಿಕಾರಿಯನ್ನು ಬುಧವಾರ ರಾತ್ರಿ  ಬಂಧಿಸಿದ್ದಾರೆ. 

Ads on article

Advertise in articles 1

advertising articles 2

Advertise under the article