ಕೆರೆಗೆ ಹಾರಿ ಸಹೋದರಿಯರಿಬ್ಬರು ಸಾವಿಗೆ ಶರಣು: ಬಾಳಿ ಬದುಕಬೇಕಾದವರು ಜೀವನ ಅಂತ್ಯಗೊಳಿಸಿದ್ದೇಕೆ?

ಕೊಡಗು: ಕೆರೆಗೆ ಹಾರಿ ಸಹೋದರಿಯರಿಬ್ಬರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ರವಿವಾರ ನಡೆದಿದೆ.

ನಾಮೇರ ಉದಯ ಎಂಬುವರ ಪುತ್ರಿಯರಾದ ದಮಯಂತಿ(20) ಮತ್ತು ಹರ್ಷಿತಾ(18) ಮೃತಪಟ್ಟ ಸಹೋದರಿಯರು. 

ದಮಯಂತಿ, ಹಳ್ಳಿಗಟ್ಟು ಸಿಇಟಿ ಕಾಲೇಜಿನಲ್ಲಿ ಅಕ್ಕ  ಇಂಜಿನಿಯರಿಂಗ್ ಓದುತ್ತಿದ್ದರೆ, ಹರ್ಷಿತಾ ಕಾವೇರಿ ಕಾಲೇಜಿನಲ್ಲಿ  ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದಳು. 

ಸಹೋದರಿಯರಿಬ್ಬರು ಕೆರೆಗೆ ಹಾರಿ ಪ್ರಾಣಬಿಟ್ಟಿದ್ದೇಕೆ, ಸಾವಿನ ಹಿಂದಿನ ರಹಸ್ಯವೇನು? ಎಂಬುದಕ್ಕೆ ಸೂಕ್ತ ಕಾರಣ ಇನ್ನೂ ಲಭ್ಯವಾಗಿಲ್ಲ. ಆದರೆ, ಕೌಟುಂಬಿಕ ಕಲಹದಿಂದ ಬೇಸತ್ತು ಸಹೋದರಿಯರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu