ಮಡಿಕೇರಿ: ನಗರದ ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಸುಳುಗೋಡು ಮೂಲದ ಯುವಕನೋರ್ವನು ಮಧ್ಯಪ್ರದೇಶ ರಾಜ್ಯದಲ್ಲಿ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದಲ್ಲಿ ನೌಕರಿ ಮಾಡುತ್ತಿದ್ದ ಸುಳುಗೋಡು ನಿವಾಸಿ ದರ್ಶನ್ (28) ಮೃತ ಯುವಕ.
ಈತನಿಗೆ ತನ್ನದೇ ಊರಿನ ಶಿಲ್ಪಾ ಎಂಬ ಯುವತಿಯೊಂದಿಗೆ ಪ್ರೇಮವಿತ್ತು. ಆಕೆ ಇದೀಗ ವಿವಾಹ ನಿರಾಕರಿಸಿ ಬೇರೊಬ್ಬನನ್ನು ಪ್ರೀತಿಸಲು ಆರಂಭಿಸಿದ್ದರಿಂದ ಮನನೊಂದ ದರ್ಶನ್ ಸಾವಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಆದ್ದರಿಂದ ಪ್ರೇಮವೈಫಲ್ಯವೇ ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ.
ಮೃತ ದರ್ಶನ್ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆಂಬ ಮಾಹಿತಿ ಲಭಿಸಿದೆ. ಮೃತದೇಹವನ್ನು ಸುಳುಗೋಡು ಗ್ರಾಮಕ್ಕೆ ತರಲಾಗಿದ್ದು, ಪೊಲೀಸ್ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.