Job in Sports dept at Mangaluru- ಮಂಗಳೂರು: ಯುವ ಸಬಲೀಕರಣ ಕ್ರೀಡಾ ಇಲಾಖೆಯಲ್ಲಿ ನೇಮಕಾತಿ

ಮಂಗಳೂರು: ಯುವ ಸಬಲೀಕರಣ ಕ್ರೀಡಾ ಇಲಾಖೆಯಲ್ಲಿ ನೇಮಕಾತಿ





ಮಂಗಳೂರು ನಗರದಲ್ಲಿ ಯುವ ಕ್ರೀಡಾಳುಗಳ ಅನುಕೂಲಕ್ಕೆ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.



ದಕ್ಷಿಣ ಕನ್ನಡ ಜಿಲ್ಲೆಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಉದ್ಯೋಗಾವಕಾಶ ಲಭ್ಯವಾಗಿದೆ. ಖೇಲೋ ಇಂಡಿಯಾ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಮಂಗಳೂರಿನಲ್ಲಿ ಈ ನೇಮಕಾತಿ ನಡೆಯುತ್ತಿದೆ.


ಇಲಾಖೆ: ಯುವ ಸಬಲೀಕರಣ ಕ್ರೀಡಾ ಇಲಾಖೆ


ಹುದ್ದೆಯ ಹೆಸರು:

1) ಮಸಾಜ್ ಎಕ್ಸ್‌ಪರ್ಟ್

2) ಯಂಗ್ ಪ್ರೊಫೆಷನಲ್

3) ನ್ಯೂಟ್ರೀಷಿಯನಿಸ್ಟ್



ಶೈಕ್ಷಣಿಕ ಅರ್ಹತೆ: ಅಧಿಸೂಚನೆ/ಪ್ರಕಟಣೆ ಪ್ರಕಾರ ಸೂಕ್ತ ಶೈಕ್ಷಣಿಕ ಅರ್ಹತೆ



ನೇಮಕ ಹೇಗೆ?: ನೇರ ನೇಮಕಾತಿ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-10-2021


ಹೆಚ್ಚಿನ ಮಾಹಿತಿಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಇರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಸಂಪರ್ಕಿಸುವಂತೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.





ಮಂಗಳೂರು: ಜಿಲ್ಲಾ ಸಮಾಜ ನೀತಿ ಕಚೇರಿಯಲ್ಲಿ ನೇಮಕಾತಿ



ಮಂಗಳೂರು ಜಿಲ್ಲಾ ಸಮಾಜ ನೀತಿ ಕಚೇರಿಯಲ್ಲಿ ರಚಿಸಲಾಗುವ ಜಿಲ್ಲಾ ಮಟ್ಟದ ಸಮಿತಿಗೆ ಸಂಪನ್ಮೂಲ ವ್ಯಕ್ತಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.



ಮಾದಕ ಪದಾರ್ಥ ಸೇವೆ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಮಿತಿ ರಚಿಸಲಾಗುತ್ತಿದೆ.



ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 15ರಂದು ಜಿಲ್ಲಾ ಸಮಾಜ ನೀತಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿ ಯಾ ಜಿಲ್ಲಾ ಸಮಾಜ ನೀತಿ ಕಚೇರಿಯಿಂದ ಪಡೆದುಕೊಳ್ಳಬಹುದಾಗಿದೆ.