-->
Cong Womens gift phenyl to Nalin- ಅಷ್ಟಕ್ಕೂ ಕೊಪ್ಪಳದ ಮಹಿಳಾ ಘಟಕ ನಳಿನ್ ಅವರಿಗೆ ಫಿನಾಯಿಲ್ ಗಿಫ್ಟ್ ನೀಡಿದ್ದೇಕೆ..?

Cong Womens gift phenyl to Nalin- ಅಷ್ಟಕ್ಕೂ ಕೊಪ್ಪಳದ ಮಹಿಳಾ ಘಟಕ ನಳಿನ್ ಅವರಿಗೆ ಫಿನಾಯಿಲ್ ಗಿಫ್ಟ್ ನೀಡಿದ್ದೇಕೆ..?

ಅಷ್ಟಕ್ಕೂ ಕೊಪ್ಪಳದ ಮಹಿಳಾ ಘಟಕ ನಳಿನ್ ಅವರಿಗೆ ಫಿನಾಯಿಲ್ ಗಿಫ್ಟ್ ನೀಡಿದ್ದೇಕೆ..?File Photo


File Photosಕೊಪ್ಪಳದ ಕಾಂಗ್ರೆಸ್ ಮಹಿಳಾ ಘಟಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಗಿಫ್ಟ್ ನೀಡಿದೆ. ಮಹಿಳಾ ಘಟಕದ ಸದಸ್ಯರು ನೀಡಿದ ಫಿನಾಯಿಲ್ ಬಾಟಲಿನ ಪಾರಿತೋಷಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.


ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಒಬ್ಬ ಮಾದಕ ವ್ಯಸನಿ ಹಾಗೂ ಡ್ರಗ್​ ಪೆಡ್ಲರ್​ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ವಿರೋಧಿಸಿ ಕೊಪ್ಪಳದ ಕಾಂಗ್ರೆಸ್​ ಮಹಿಳಾ ಘಟಕ ವಿನೂತನ ಪ್ರತಿಭಟನೆ ನಡೆಸಿತ್ತು.


ಕಾಂಗ್ರೆಸ್​ ಮಹಿಳಾ ಘಟಕದ ಸದಸ್ಯೆಯರು ನಳಿನ್ ಕುಮಾರ್ ಕಟೀಲ್ ಅವರಿಗೆ ಫಿನಾಯಿಲ್ ಕಳುಹಿಸಿ ಕೊಟ್ಟು ನಳಿನ್​ ಕುಮಾರ್​ ಕಟೀಲ್ ​ ಅವರೇ ನಿಮ್ಮ ಬಾಯಿ ತೊಳೆದುಕೊಳ್ಳಿ ಎಂದು ಕೊಪ್ಪಳ ಅಂಚೆ ಕಚೇರಿ ಮೂಲಕ ಫಿನಾಯಿಲ್ ಬಾಟಲಿಯನ್ನು ನಳಿನ್ ಕುಮಾರ್ ಕಟೀಲ್ ಅವರಿಗೆ ಕಳುಹಿಸಿ ಕೊಡಲಾಗಿದೆ.


ನಿಮ್ಮ ಹೊಲಸು ಬಾಯಿಯನ್ನು ಫಿನಾಯಿಲ್ ಹಾಕಿ ತೊಳೆದುಕೊಳ್ಳಿ ಎಂದು ಮಹಿಳಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಮೂಲಕ ರಾಹುಲ್ ಗಾಂಧಿ ವಿರುದ್ಧ ನಳಿನ್ ಕುಮಾರ್ ಕಟೀಲ್ ನೀಡಿದ ಹೇಳಿಕೆ ತಿರುಗೇಟು ನೀಡಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article