
ಬಂಟ್ವಾಳದಲ್ಲಿ ನಡೆಯಿತು ಹೀನ ಕೃತ್ಯ; ಅಪ್ರಾಪ್ತ ಬಾಲಕಿಯ ಅಪಹರಿಸಿ ಗ್ಯಾಂಗ್ ರೇಪ್!
10/09/2021 12:06:00 AM
ಮಂಗಳೂರು: ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿದ ತಂಡವೊಂದು ಆಕೆಯನ್ನು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬಂಟ್ವಾಳ ದಲ್ಲಿ ನಡೆದಿದೆ.
ಅಪ್ರಾಪ್ತಬಾಲಕಿಯ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬಾಲಕಿಯನ್ನು ಅಪಹರಿಸಿದ ತಂಡ ಅಮ್ಟಾಡಿ ಎಂಬಲ್ಲಿಗೆ ಕೊಂಡೋಯ್ದು ಅಲ್ಲಿ ಗ್ಯಾಂಗ್ ರೇಪ್ ಎಸಗಿದೆ. ಆಕೆಗೆ
ಮತ್ತು ಬರುವ ಔಷಧಿ ನೀಡಿ ಆಕೆಯನ್ನು ಅತ್ಯಾಚಾರ ಎಸಗಿ ಬ್ರಹ್ಮರಕೂಟ್ಲು ಬಳಿ ಬಿಟ್ಟು ಹೋಗಿದ್ದಾರೆ.
ಘಟನೆಯ ಬಳಿಕ ಬಾಲಕಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ