ಮಾತು ಬಾರದ, ಕಿವಿ ಕೇಳದ ಅಪ್ರಾಪ್ತ ಬಾಲಕಿ ಮೇಲೆ ಆರು ಮಂದಿ ಕಾಮುಕರಿಂದ ಪೈಶಾಚಿಕ ಕೃತ್ಯ: ಆರೋಪಿಗಳ ಬಂಧನ

ಭೋಪಾಲ್: ಮಾತು ಬಾರದ, ಕಿವಿ ಕೇಳದ ಅಪ್ರಾಪ್ತ ಬಾಲಕಿಯ ಮೇಲೆ ಆರು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ರಾಕ್ಷಸೀ ಕೃತ್ಯ ಮಧ್ಯಪ್ರದೇಶದ ಶಾಡೊಲ್ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ನಾಲ್ವರು ಅಪ್ರಾಪ್ತರು ಸೇರಿದಂತೆ 6 ಮಂದಿ ಈ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು  ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಈ ಹೇಯ ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಹಂಚಿಕೊಂಡಿದ್ದಾರೆ.

ಸಂತ್ರಸ್ತ ಬಾಲಕಿಯ ತಂದೆಯ ಮೊಬೈಲ್ ಗೆ ಸ್ಥಳೀಯವಾಗಿ ಹರಿದಾಡುತ್ತಿದ್ದ ಫೋಟೊಗಳು, ವೀಡಿಯೋಗಳು ದೊರಕಿದೆ‌. ಈ ವೇಳೆ ಮಗಳ ಮೇಲಾದ ದೌರ್ಜನ್ಯದ ಕುರಿತು ತಿಳಿದು ಬಂದಿದೆ. ಆದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಕ್ಷಣ ಬಾಲಕಿಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕಾರ್ಯಾಚರಣೆ ನಡೆಸಿ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಿತರು ಘಟನೆಯ ಬಗ್ಗೆ ಬಾಲಕಿಯನ್ನು ಕೇಳಿದ್ದು, ಕೈ ಸನ್ನೆಯ ಮೂಲಕ ತನ್ನ ಮೇಲಾದ ಕೃತ್ಯವನ್ನು ಹೇಳಿಕೊಂಡಿದ್ದಾಳೆ. ಪೊಲೀಸರು ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu