ಕೊಕ್ಕಡದಲ್ಲಿ 28 ವರ್ಷದ ರಶ್ಮಿತಾ ಆತ್ಮಹತ್ಯೆ- ವಿಚಾರ ತಿಳಿದ ಪತಿ ಮಾಡಿದ್ದೇನು ಗೊತ್ತಾ?


ಮಂಗಳೂರು: ಬೆಳ್ತಂಗಡಿ ತಾಲೂಕಿನ  ಕೊಕ್ಕಡ ಗ್ರಾಮದ  28 ವರ್ಷದ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಪುತ್ಯೆ ಎಂಬಲ್ಲಿನ ರಶ್ಮಿತಾ ಎಂಬವರು ಆತ್ಮಹತ್ಯೆ ಮಾಡಿಕೊಂಡವರು.ಇವರು ತಮ್ಮ ಮನೆಯಲ್ಲಿ  ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

 ಇಂದು ಮಧ್ಯಾಹ್ನ ವೇಳೆಗೆ ರಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ಯೆ ನಿವಾಸಿ ರಾಜೇಶ್ ಎಂಬವರ ಪತ್ನಿಯಾಗಿರುವ  ರಶ್ಮಿತಾ(28ವ.) ಆತ್ಮಹತ್ಯೆ ಗೆ ಕಾರಣ 
ತಿಳಿದುಬಂದಿಲ್ಲ.

 ಮನೆಯಲ್ಲಿ ಮಧ್ಯಾಹ್ನ ಯಾರು ಇಲ್ಲದ ವೇಳೆ ರಶ್ಮಿತಾರವರು  ನೇಣು ಬಿಗಿದು ಕೊಂಡಿದ್ದಾರೆ. 

ಪತಿಯಿಂದಲೂ ಆತ್ಮಹತ್ಯೆ ಯತ್ನ!

ಪತ್ನಿ  ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಮನೆಗೆ ಬಂದ ರಶ್ಮಿತಾರವರ ಪತಿ ರಾಜೇಶ್ ಕೂಡ  ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಗ  ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಧಮ೯ಸ್ಥಳ ಠಾಣಾ  ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.