-->

ಪ್ರೀತಿ ನಿರಾಕರಿಸಿದ 22 ವರ್ಷದ ಕಾಲೇಜು ವಿದ್ಯಾರ್ಥಿನಿ - ಕತ್ತು ಸೀಳಿದ ವಿದ್ಯಾರ್ಥಿ!

ಪ್ರೀತಿ ನಿರಾಕರಿಸಿದ 22 ವರ್ಷದ ಕಾಲೇಜು ವಿದ್ಯಾರ್ಥಿನಿ - ಕತ್ತು ಸೀಳಿದ ವಿದ್ಯಾರ್ಥಿ!

ಕೇರಳ:  ಸಹಪಾಠಿ ವಿದ್ಯಾರ್ಥಿನಿ ಪ್ರೀತಿಸಲು ನಿರಾಕರಿಸಿದಲೆಂದು  ಆಕೆಯನ್ನು ಸಹಪಾಠಿಯೆ ಕಾಲೇಜು ಆವರಣದಲ್ಲಿಯೇ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.

ವಿದ್ಯಾರ್ಥಿನಿಯನ್ನು ಕತ್ತು ಸೀಳಿ ಭೀಕರವಾಗಿ ಕೊಂದಿರುವ ದುರ್ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ಕೊಟ್ಟಾಯಂನ ವೈಕಂನ ತಲೆಯೋಳಪರಂಬು   ನಿತಿನಮೋಲ್ (22) ಹತ್ಯೆಯಾದ ವಿದ್ಯಾರ್ಥಿನಿ. ಈಕೆ ಕೊಟ್ಟಾಯಂನ ಸೇಂಟ್ ಥಾಮಸ್ ಕಾಲೇಜು ಕ್ಯಾಂಪಸ್​ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ.


 ಈಕೆ BVOC (Bachelor of Vocation) ವ್ಯಾಸಂಗ ಮಾಡುತ್ತಿದ್ದು ಈಕೆಯಲ್ಲಿ ಕೂತಟ್ಟುಕುಲಂನ ಉಪ್ಪಾಣಿ ನಿವಾಸಿಯಾದ ಅಭಿಷೇಕ್ ಬೈಜು ಪ್ರೇಮ ನಿವೇದನೆ ಮಾಡಿದ್ದ. ಆಕೆ ನಿರಾಕರಿಸಿದ್ದಕ್ಕೆ ಪರೀಕ್ಷಾ ಕೊಠಡಿಗೆ ಬರುವ ವೇಳೆ ಆಕೆಯ  ತಲೆ ಕಡಿದು ಅಭಿಷೇಕ್ ಬೈಜು ಹತ್ಯೆ ಮಾಡಿದ್ದಾನೆ.

 ಆರೋಪಿ ಅಭಿಷೇಕ್ ಬೈಜುನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article