ಮಧ್ಯಪ್ರದೇಶ: ಮಧ್ಯಪ್ರದೇಶದ ವಿಜಯ್ ನಗರ ಪೊಲೀಸರು ವೈಶ್ಯಾವಟಿಕೆ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿಯೊಬ್ಬನನ್ನು ವಿಚಾರಣೆ ನಡೆಸಿದ ವೇಳೆ ಆತ 200 ಯುವತಿಯರನ್ನು ಮಾರಾಟ ಮಾಡಿರುವ ಮತ್ತು 75 ಯುವತಿಯನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಪೊಲೀಸರು ವೇಶ್ಯಾವಾಟಿಕೆ ದಂಧೆಯನ್ನು ಬಯಲಿಗೆಳೆಯುವ ವೇಳೆ ಬಾಂಗ್ಲಾದೇಶದ 21 ಯುವತಿಯರನ್ನು ರಕ್ಷಿಸಲಾಗಿತ್ತು.
ಈ ಪ್ರಕರಣದಲ್ಲಿ ಗುಜರಾತ್‌ನ ಸೂರತ್ನಲ್ಲಿ ವಿಜಯ್‌ನಗರ ಪೊಲೀಸರು ಮತ್ತು ಇಂದೋರ್ ಎಸ್ಐಟಿ ಜಂಟಿ ಕಾರ್ಯಾಚರಣೆ ನಡೆಸಿ ಮುನೀರ್ ಅಲಿಯಾಸ್ ಮುನಿರುಲ್ ಎಂಬಾತನನ್ನು ಬಂಧಿಸಿದ್ದರು.
ಈತ ಬಾಂಗ್ಲಾದೇಶದಿಂದ ಇಂದೋರ್‌ಗೆ ಯುವತಿಯರನ್ನು ಕರೆತಂದು ಭಾರತದ ವಿವಿಧೆಡೆಗೆ ಕಳುಹಿಸಿ ಕೊಡುತ್ತಿದ್ದ. ಈ ಪ್ರಕರಣದ ವಿಚಾರಣೆಯ ವೇಳೆ ಈತ 200ಕ್ಕೂ ಹೆಚ್ಚು ಬಾಂಗ್ಲಾದೇಶಿ ಯುವತಿಯರನ್ನು ಭಾರತಕ್ಕೆ ಕರೆತಂದು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.
ಕಳೆದ 5 ವರ್ಷಗಳಿಂದ ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದನಂತೆ. ಅಷ್ಟೇ ಅಲ್ಲ ಈತ ಇದುವರೆಗೆ 75 ಹುಡುಗಿಯರನ್ನು ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ.