ಬಂಟ್ವಾಳದ 16 ವರ್ಷದ ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣ- ಒಟ್ಟು ನಾಲ್ವರು ಪೊಲೀಸರ ವಶದಲ್ಲಿ

 

 

ಮಂಗಳೂರು: ಬಂಟ್ವಾಳದಲ್ಲಿ 16 ವರ್ಷದ ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಟ್ವಾಳ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ..

ಬಂಟ್ವಾಳದಲ್ಲಿ ಶುಕ್ರವಾರ 16 ವರ್ಷ ಪ್ರಾಯದ ಯುವತಿಯನ್ನು ಶಾಲೆಗೆ ಹೋಗುತ್ತಿದ್ದವೇಳೆ ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು.  ಯುವತಿ ಪರಿಚಿತ ಯುವಕ ಶರತ್ ಶೆಟ್ಟಿ ಎಂಬಾತ ಈ ಕೃತ್ಯ ನಡೆಸಿದ್ದ. ಈತ ಬಿಳಿ ಬಣ್ಣದ ಕಾರಿನಲ್ಲಿ ಐವರೊಂದಿಗೆ ಈಕೆಯನ್ನು ಅಪಹರಿಸಿ ಅಮ್ಟಾಡಿ ಎಂಬಲ್ಲಿಗೆ ಕೊಂಡೊಯ್ದು ಅತ್ಯಾಚಾರ ಮಾಡಿದ್ದರು.

ಈಕೆಯನ್ನು ಅತ್ಯಾಚಾರ ಮಾಡಿದ ಬಳಿಕ ಬ್ರಹ್ಮರಕೂಟ್ಲುವಿನಲ್ಲಿ ಬಿಟ್ಟು ಹೋಗಿದ್ದು ಅಸ್ವಸ್ಥಗೊಂಡ ಯುವತಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ  ದಾಖಲಾಗಿದ್ದಳ.

 

ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಇಂದು ಮಧ್ಯಾಹ್ನ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಸಂಜೆಯ ವೇಳೆಗೆ ಒಟ್ಟು ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

BREAKING NEWS
Loading latest news...
Join our WhatsApp Channel Powered By : Online Pudu