SHOCKING NEWS: ಸಾಂಪ್ರದಾಯಿಕ ಹಬ್ಬ ಆಚರಣೆ ವೇಳೆ ದುರ್ಘಟನೆ- 7 ಅಪ್ರಾಪ್ತ ಬಾಲಕಿಯರು ಸಾವು!




ಲತೇಹಾರ್: ಜಾರ್ಖಂಡ್ ರಾಜ್ಯದ ಸಾಂಪ್ರದಾಯಿಕ ಹಬ್ಬ ಆಚರಣೆ ಸಂದರ್ಭದಲ್ಲಿ ನದಿ ನೀರಿನಲ್ಲಿ ಮುಳುಗಿ 7 ಅಪ್ರಾಪ್ತ ಬಾಲಕಿಯರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್​ ರಾಜ್ಯದ ಲತೇಹಾರ್​ನಲ್ಲಿ ನಡೆದಿದೆ.

ಜಾರ್ಖಂಡ್​ನಲ್ಲಿ ಸಾಂಪ್ರದಾಯಿಕ ಹಬ್ಬವಾಗಿ ಕರ್ಮ ಎಂಬ ಆಚರಣೆ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಕರ್ಮ ವಿಸರ್ಜನೆ ಮಾಡಲು ಹೋದ ವೇಳೆ ನದಿಯಲ್ಲಿ ಈ ಅವಘಡ ಸಂಭವಿಸಿದೆ. 

ಘಟನೆಯಲ್ಲಿ ರೀನಾ ಕುಮಾರಿ (11), ಸುನಿತಾ ಕುಮಾರಿ (17) ರೇಖಾ ಕುಮಾರಿ(18), ಲಕ್ಷ್ಮಿ ಕುಮಾರಿ (8),  ಮೀನಾ ಕುಮಾರಿ (8), ಸುಷ್ಮಾ ಕುಮಾರಿ (7),
ಪಿಂಕಿ ಕುಮಾರಿ (15),   ಸಾವನ್ನಪ್ಪಿದ್ದಾರೆ.
ಇವರು ಲತೇಹಾರ್ ನ ಶೇರೆಗಡಾ ಗ್ರಾಮದ ನಿವಾಸಿಗಳು ಆಗಿದ್ದಾರೆ .

ಜಾರ್ಖಂಡ್​ನ ಬುಡಕಟ್ಟು ಜನಾಂಗವು ಸಹೋದರರು ಆರೋಗ್ಯವಾಗಿ ಜೀವನ ನಡೆಸಲಿ ಎಂಬ ಉದ್ದೇಶದಿಂದ
 ಸಾಂಪ್ರದಾಯಿಕ ವಿಶೇಷ ಹಬ್ಬ( ಕರ್ಮ ವಿಸರ್ಜನೆ) ಎಂಬ ಆಚರಣೆ ಮಾಡುತ್ತದೆ.   ಜಮೀನಿನಲ್ಲಿ ಬೆಳೆದವುಗಳನ್ನು  ಪೂಜಿಸಿ ಅವುಗಳನ್ನು ನದಿಯಲ್ಲಿ ವಿಸರ್ಜನೆ ಮಾಡುವುದು‌ ಸಂಪ್ರದಾಯ. ಈ  ಆಚರಣೆಯ ವೇಳೆ ಎಲ್ಲ ಬಾಲಕಿಯರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

 ನದಿ‌ ನೀರಿನಲ್ಲಿ ಮುಳುಗಿದ ಎಲ್ಲ ಬಾಲಕಿಯರ ಮೃತದೇಹ ಹೊರತೆಗೆಯುವಲ್ಲಿ ಮುಳುಗುತಜ್ಞರು ಮತ್ತು ಪೊಲೀಸರು ಯಶಸ್ವಿಯಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

 
BREAKING NEWS
Loading latest news...
Join our WhatsApp Channel Powered By : Online Pudu