Shobha Vs Owaisi | ಓವೈಸಿ ಅವರನ್ನು ಅಫ್ಘಾನ್‌ಗೆ ಕಳಿಸೋದು ಉತ್ತಮ: ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ




ಮುಂಬೈ: ಅಫ್ಘಾನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ವಿರುದ್ಧ ಕೇಂದ್ರ ಕೃಷಿ ಸಚಿವ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಓವೈಸಿಯವರನ್ನು ಯುದ್ಧಗ್ರಸ್ಥ ಅಫ್ಘಾನಿಸ್ತಾನಕ್ಕೆ ಕಳುಹಿಸುವುದು ಉತ್ತಮ ಎಂದು ಹೇಳಿದ್ದಾರೆ.


ದೇಶದಲ್ಲಿ ಒಂಬತ್ತು ಹೆಣ್ಣು ಮಕ್ಕಳ ಪೈಕಿ ಒಂದು ಐದು ವರ್ಷಕ್ಕಿಂತ ಮುಂಚಿತವಾಗಿಯೇ ಸಾವನ್ನಪ್ಪುತ್ತಿದೆ ಎಂಬ ವರದಿಯನ್ನೊಂದನ್ನು ಉಲ್ಲೇಖಿಸಿ ಮಾತನಾಡಿದ್ದ ಓವೈಸಿ, ಇಲ್ಲಿಯೇ ಮಹಿಳೆಯರ ಮೇಲೆ ದೌರ್ಜನ್ಯ, ಅಪರಾಧಗಳು ನಡೆಯುತ್ತಿರುವಾಗ, ಕೇಂದ್ರ ಸರ್ಕಾರ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಚಿಂತೆ ಮಾಡುತ್ತಿದೆ. ಇಲ್ಲಿ ಅದು ನಡೆಯುತ್ತಿಲ್ಲವೇ ಎಂದು ಕಠಿಣ ಶಬ್ದಗಳಿಂದ ಟೀಕಿಸಿದ್ದರು.


ಓವೈಸಿ ಅವರ ಈ ಹೇಳಿಕೆಗೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ. ಮುಸ್ಲಿಂ ಮಹಿಳೆಯರು ಮತ್ತು ಅವರ ಸಮುದಾಯದ ರಕ್ಷಣೆಗೆ ಓವೈಸಿಯನ್ನು ಅಫ್ಘಾನ್‌ ಕಳುಹಿಸುವುದು ಉತ್ತಮ ಎಂದು ಹೇಳಿದರು.

BREAKING NEWS
Loading latest news...
Join our WhatsApp Channel Powered By : Online Pudu