-->

Mangaluru youth response to Police recruitment- ಸಿಬ್ಬಂದಿ ನೇಮಕಾತಿ: ಪೊಲೀಸ್ ಆಯುಕ್ತರ ಕರೆಗೆ ಸ್ಪಂದಿಸಿದ ಯುವ ಮಂಗಳೂರು!

Mangaluru youth response to Police recruitment- ಸಿಬ್ಬಂದಿ ನೇಮಕಾತಿ: ಪೊಲೀಸ್ ಆಯುಕ್ತರ ಕರೆಗೆ ಸ್ಪಂದಿಸಿದ ಯುವ ಮಂಗಳೂರು!



ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ದಶಕದ ಬಳಿಕ ಮಂಗಳೂರಿನ ಯುವ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಿದೆ.


ಇದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಮಾಡಿದ ಚಮತ್ಕಾರ. ಕೆಲ ದಿನಗಳ ಹಿಂದಷ್ಟೇ ಅವರು ಪೊಲೀಸ್ ನೇಮಕಾತಿಯಲ್ಲಿ ಸ್ಥಳೀಯ ಯುವಕ ಯುವತಿಯರು ಪಾಲ್ಗೊಳ್ಳುವಂತೆ ಕರೆ ನೀಡಿದ್ದರು. ಅಲ್ಲದೆ, ಆಸಕ್ತ ಸ್ಥಳೀಯ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ 

ನೀಡುವ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆ ನೀಡಿದ್ದರು.



ಅದರಂತೆ ಮಂಗಳೂರಿನಲ್ಲಿ ಪಿಎಸ್‌ಐ ನೇಮಕಾತಿಗೆ 218 ಅಭ್ಯರ್ಥಿಗಳು ಮತ್ತು ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗೆ 386 ಅಭ್ಯರ್ಥಿಗಳು ಸ್ಪಂದಿಸಿದ್ದಾರೆ. ಒಟ್ಟು 604 ಮಂದಿ ಸ್ಥಳೀಯರು ಪೊಲೀಸ್ ಆಯುಕ್ತರ ಕರೆಗೆ ಸ್ಪಂದಿಸಿದ್ದು, ಇಲಾಖೆಯ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.


ಈ ಪೈಕಿ ಸಿಂಹ ಪಾಲು ದಕ್ಷಿಣ ಕನ್ನಡಕ್ಕೆ ಸೇರಿದೆ. ಒಟ್ಟು 604 ಅರ್ಹ ಅಭ್ಯರ್ಥಿಗಳ ಪೈಕಿ 566 ಅಭ್ಯರ್ಥಿಗಳು ದ.ಕ. ಜಿಲ್ಲೆಯವರಾಗಿದ್ದಾರೆ. 38 ಮಂದಿ ಉಡುಪಿ, ಉತ್ತರಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ.






ಈ ಪೈಕಿ 481 ಯುವಕರು, 123 ಮಂದಿ ಯುವತಿಯರು. 372 ಅಭ್ಯರ್ಥಿಗಳು ಪದವೀಧರರಾಗಿದ್ದು, 232 ಪದವಿಯೇತರರಾಗಿದ್ದಾರೆ.


ಸದರಿ ಅಭ್ಯರ್ಥಿಗಳ ಪೈಕಿ 100 ಅಭ್ಯರ್ಥಿಗಳ ಒಂದು ತಂಡಕ್ಕೆ ಊಟ ಮತ್ತು ವಸತಿ ಸೌಲಭ್ಯದೊಂದಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶ ಕಲ್ಪಸಲಾಗಿದೆ. 


ಇನ್ನು 100 ಅಭ್ಯರ್ಥಿಗಳ ಇನ್ನೊಂದು ತಂಡವನ್ನು ರಚಿಸಿ ಅವರಿಗೆ ವಸತಿಯೇತರ ಸೌಲಭ್ಯದೊಂದಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಯೋಚನೆ ಇದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article