Mangaluru- Explosive seized-one arrest | ಮಂಗಳೂರಿನಲ್ಲಿ 1,725 ಕೆ.ಜಿ. ಅಪಾಯಕಾರಿ ಸ್ಫೋಟಕ- ಆರೋಪಿಯ ಬಂಧನ





ನಗರದ ಬಂದರು ಪ್ರದೇಶದ "ಗಾಂಧಿ ಸನ್ಸ್" ಕಟ್ಟಡದ ಕೊಠಡಿಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ 1,725 ಕೆ.ಜಿ.ಗೂ ಅಧಿಕ ಅಪಾಯಕಾರಿ ಸ್ಫೋಟಕ ದಾಸ್ತಾನು ಪತ್ತೆಯಾಗಿದೆ. ಪ್ರಕರಣದ ಸಂಬಂಧ ಆರೋಪಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


50 ವರ್ಷ ವಯಸ್ಸಿನ ಆನಂದ ಗಟ್ಟಿ ಬಂಧಿತ ವ್ಯಕ್ತಿಯಾಗಿದ್ದಾರೆ. ಆರೋಪಿ ವಶದಲ್ಲಿ ಇದ್ದ 400 ಕೆ.ಜಿ. ಸಲ್ಫರ್ ಪೌಡರ್, 350 ಕೆ.ಜಿ. ಪೊಟಾಷಿಯಂ ನೈಟ್ರೇಟ್, 50 ಕೆ. ಜಿ. ಬೇರಿಯಂ ನೈಟ್ರೇಟ್, 395 ಕೆ. ಜಿ. ಪೊಟೇಷಿಯಂ ಕ್ಲೊರೈಟ್, 260 ಕೆ. ಜಿ. ವಿವಿಧ ಅಲೂಮಿನಿಯಂ ಪೌಡರ್, 30 ಕೆ. ಜಿ. ಲೀಡ್ ಬಾಲ್ಸ್, 240 ಕೆ. ಜಿ. ಚಾರ್ಕೋಲ್, 100 ಏರ್ ರೈಲ್‌ಗಳನ್ನು ಒಳಗೊಂಡ 140 ಪ್ಯಾಲೆಟ್ಸ್ ಪ್ಯಾಕೇಟ್, 100 ಏರ್ ರೈಲ್ ಗಳನ್ನೊಳಗೊಂಡ 21 ಪಾಲೇಟ್ಸ್ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಒಟ್ಟು ಪ್ರಮಾಣ 1500 ಕೆ.ಜಿ.ಗಳಷ್ಟಾಗಿದೆ.





ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳಿರುವ ಕಟ್ಟಡದ ಕೊಠಡಿಯೊಂದರಲ್ಲಿ ಈ ಭಾರೀ ಪ್ರಮಾಣದ ಸ್ಫೋಟಕಗಳನ್ನು ಅಕ್ರಮವಾಗಿ ದಾಸ್ತಾನಿರಿಸಲಾಗಿತ್ತು ಎಂದು ತಿಳಿದು ಬಂದಿದೆ.






ಆರೋಪಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕ ಎಲ್ಲಿಂದ ಸಿಕ್ಕಿದೆ? ಎನ್ನುವುದು ತಿಳಿದು ಬಂದಿಲ್ಲ. ಸ್ಫೋಟಕ ಸಂಗ್ರಹಿಸಿಟ್ಟಿರುವ ಉದ್ದೇಶಗಳೇನು ಎನ್ನುವುದೂ ತಿಳಿದು ಬಂದಿಲ್ಲ. ಈತನಿಗೆ ದೊಡ್ಡ ಕೈಗಳ ಜೊತೆಗೆ ನಂಟಿದೆಯೇ ಎಂಬ ಸಂಶಯಗಳು ಕೇಳಿಬಂದಿದೆ.

BREAKING NEWS
Loading latest news...
Join our WhatsApp Channel Powered By : Online Pudu