-->
Corona Update- ದ.ಕ.ದಲ್ಲಿ ಕೊರೋನಾ ತಾಂಡವ; 400 ಗಡಿ ದಾಟಿದ ಸೋಂಕು, ಆರು ಮಂದಿ ಬಲಿ

Corona Update- ದ.ಕ.ದಲ್ಲಿ ಕೊರೋನಾ ತಾಂಡವ; 400 ಗಡಿ ದಾಟಿದ ಸೋಂಕು, ಆರು ಮಂದಿ ಬಲಿ
ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕೋರೋನಾ ಸೋಂಕಿನ ಅಬ್ಬರ ಇಳಿಕೆಯಾದರೆ ದಕ್ಷಿಣ ಕನ್ನಡದಲ್ಲಿ ಭಾರೀ ಏರಿಕೆ ಕಂಡುಬಂದಿದೆ.


ರಾಜ್ಯದಲ್ಲಿ ಭಾನುವಾರ 1598 ಜನರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜ್ಯದಲ್ಲೆಡೆ ಒಟ್ಟು 20 ಮಂದಿ ಸಾವನ್ನಪ್ಪಿದ್ದಾರೆ.


ದಕ್ಷಿಣ ಕನ್ನಡದಲ್ಲಿ 400ಕ್ಕೂ ಮಿಕ್ಕಿ ಹೊಸ ಕೊರೋನಾ ಸೋಂಕು ದೃಢಪಟ್ಟಿದ್ದು, ಲಾಕ್‌ಡೌನ್ ಮಧ್ಯೆಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.


ದಕ್ಷಿಣ ಕನ್ನಡದಲ್ಲಿ 438 ಹೊಸ ಪ್ರಕರಣಗಳೂ ಕಾಣಿಸಿಕೊಂಡಿದ್ದರೆ, ಆರು ಮಂದಿ ಮೃತಪಟ್ಟಿದ್ದು ಪಾಸಿಟಿವಿಟಿ ದರ ಶೇ.4.57 ರಷ್ಟಿದೆ. 


ಭಾನುವಾರ ಕೇವಲ 311 ಮಂದಿ ಸೋಂಕು ಮುಕ್ತಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 3415 ಸಕ್ರಿಯ ಪ್ರಕರಣಗಳು ದಕ್ಷಿಣ ಕನ್ನಡದಲ್ಲಿದೆ.ಬೆಂಗಳೂರಿನಲ್ಲಿ ಕೊರೋನಾ ಅಬ್ಬರದಲ್ಲಿ ಇಳಿಕೆ ಕಂಡುಬಂದಿದೆ. ಭಾನುವಾರ 348 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಒಬ್ಬ ಮಾತ್ರ ಬಲಿಯಾಗಿದ್ದಾರೆ. ಪಾಸಿಟಿವಿಟಿ ದರ ಶೇ. 1.09ರಷ್ಟಿದ್ದು, ರಾಜದಾನಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.


Ads on article

Advertise in articles 1

advertising articles 2

Advertise under the article