-->

Corona Update- ರಾಜ್ಯದಲ್ಲಿ 1785 ಹೊಸ ಕೊರೋನಾ ಪ್ರಕರಣ, 25 ಸಾವು

Corona Update- ರಾಜ್ಯದಲ್ಲಿ 1785 ಹೊಸ ಕೊರೋನಾ ಪ್ರಕರಣ, 25 ಸಾವು




ರಾಜ್ಯದಲ್ಲಿ ಕೋವಿಡ್ ಸೋಂಕು ಸಂಖ್ಯೆ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡದಲ್ಲಿ ಕೊರೋನಾ ಪ್ರಕರಣಗಳ ಈಗಲೂ ದಾಖಲೆ ಮಟ್ಟದಲ್ಲಿ ಇದೆ.


ಕೊರೋನಾ ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರ 414 ಮತ್ತು ದಕ್ಷಿಣ ಕನ್ನಡ 337 ಸಿಂಹ ಪಾಲು ಬಾಚಿಕೊಂಡಿದೆ. ಉಳಿದಂತೆ ಉಡುಪಿ 134 ಪ್ರಕರಣಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ. ಹಾಸನ 125, ಮೈಸೂರು 105 ಮತ್ತು ಕೊಡಗು 100 ಸೋಂಕುಗಳನ್ನು ದಾಖಲಿಸಿವೆ.


ರಾಜ್ಯದಲ್ಲಿ ಒಟ್ಟು 1785 ಹೊಸ ಪ್ರಕರಣಗಳು ದಾಖಲಾಗಿವೆ. 25 ಸಾವುಗಳು ಕೋವಿಡ್‌ನಿಂದ ಸಂಭವಿಸಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ ಐದು ಸಾವು ಸಂಭವಿಸದೆ. ಇನ್ನು ದಕ್ಷಿಣ ಕನ್ನಡ, ಕೋಲಾರ ಮತ್ತು ಬೆಳಗಾವಿಯಲ್ಲಿ ತಲಾ ಮೂರು ಸಾವುಗಳು ಸಂಭವಿಸಿವೆ.


ಚಿಕ್ಕಮಗಳೂರು 97, ಉತ್ತರ ಕನ್ನಡ 60, ಶಿವಮೊಗ್ಗ 35 ಹೊಸ ಪ್ರಕರಣಗಳು ದಾಖಲಾಗಿವೆ.

ದ.ಕ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 4ರ ಸಮೀಪದಲ್ಲಿ ಇದೆ. ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಇರುವುದು ಜನರನ್ನು ಕಂಗೆಡಿಸುವಂತೆ ಮಾಡಿದೆ.

Ads on article

Advertise in articles 1

advertising articles 2

Advertise under the article