-->

Prithvi Amber entering Tamil industry- ಪ್ರಥ್ವಿ ಅಂಬರ್: ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದ ಕರಾವಳಿಯ ಅಪ್ಪಟ ಪ್ರತಿಭೆ

Prithvi Amber entering Tamil industry- ಪ್ರಥ್ವಿ ಅಂಬರ್: ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದ ಕರಾವಳಿಯ ಅಪ್ಪಟ ಪ್ರತಿಭೆ



'ದಿಯಾ' ಚಿತ್ರದ ಮೂಲಕ ಗಡಿ ದಾಟಿ ಜನಪ್ರಿಯತೆ ಗಳಿಸಿರುವ ಕರಾವಳಿಯ ಪ್ರತಿಭೆ ಪೃಥ್ವಿ ಅಂಬರ್ ಇದೀಗ ತಮಿಳು ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ಅವರ ನಟಿಸಲಿರುವ ತಮಿಳು ಚಿತ್ರದಲ್ಲಿ ಡಾಲಿ ಧನಂಜಯ್ ಸಹ ನಟಿಸುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.


ವಿಜಯ್ ಮಿಲ್ಟನ್ ನಿರ್ದೇಶನದ ''ಮಳೈ ಪಿಡಿಕ್ಕಾದ ಮಣಿದನ್'' ಚಿತ್ರದ ಮೂಲಕ ಪೃಥ್ವಿ ಅಂಬರ್ ತಮಿಳು ಚಲನಚಿತ್ರ ರಂಗಕ್ಕೆ ಕಾಲಿಡುತ್ತಿದ್ದಾರೆ.


ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿರುವ ವಿಜಯ್ ಮಿಲ್ಟನ್ ಪ್ರಸ್ತುತ ಶಿವರಾಜ್ ಕುಮಾರ್, ಪೃಥ್ವಿ ಅಂಬರ್ ಮತ್ತು ಧನಂಜಯ್ ಅಭಿನಯದ 'ಬೈರಾಗಿ' ಚಿತ್ರವನ್ನು ನಿರ್ದೇಶಿಸುತ್ತಾರೆ.


"ಮಳೈ ಪಿಡಿಕ್ಕಾದ ಮಣಿದನ್" ಚಿತ್ರದಲ್ಲಿ ವಿಜಯ್ ಆಂಟನಿ ನಾಯಕನಾಗಿ ತಾರಾಗಣದಲ್ಲಿ ಇದ್ದಾರೆ. ಪೃಥ್ವಿ ಅಂಬರ್ ಹಾಗೂ ಧನಂಜಯ್ ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಆಗಸ್ಟ್ 12ರಿಂದ ಆರಂಭವಾಗಲಿದೆ.


'ದಿಯಾ' ಚಿತ್ರದ ಹಿಂದಿ ರಿಮೇಕ್ ಮೂಲಕ ಬಾಲಿವುಡ್ ಗೆ ಕಾಲಿಟ್ಟಿರೋ ಪೃಥ್ವಿ ಅಂಬರ್ ಕನ್ನಡದ ಹಲವು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.


ಅವರು ನಟಿಸಿರುವ 'ಲೈಫ್ ಇಸ್ ಬ್ಯೂಟಿಫುಲ್', 'ForRegn', 'ಬೈರಾಗಿ' 'ಶುಗರ್ ಲೆಸ್' ಚಿತ್ರಗಳು ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿವೆ.


ಈ ಮೂಲಕ ತುಳುನಾಡಿನ ಪ್ರತಿಭೆ ಪ್ರಥ್ವಿ ಅಂಬರ್ ಮತ್ತೊಂದು ಮೈಲುಗಲ್ಲು ಸ್ಥಾಪಿಸಲಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article