ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಕೊರೋನಾ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಶುಕ್ರವಾರ 300ರ ಗಡಿಯಲ್ಲಿ ಇದ್ದ ಸೋಂಕು 269ಕ್ಕೆ ಇಳಿದಿದೆ. ಆದರೆ, ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
ಕೋವಿಡ್ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಶುಕ್ರವಾರ 179 ಆಗದ್ದರೆ, ಶನಿವಾರ 239 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೊರೋನಾ ಪಾಸಿಟಿವಿಟಿ ದರ ಶುಕ್ರವಾರ ಶೇಕಡಾ 4.46ರಷ್ಟು ಇರುವುದು ಭಾರೀ ಆತಂಕ ತಂದಿದೆ.
ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಶುಕ್ರವಾರ 2079ರಷ್ಟಿತ್ತು. ಶನಿವಾರ ಈ ಸಂಖ್ಯೆ 2105ಕ್ಕೇರಿದೆ.
ಶುಕ್ರವಾರ ಮತ್ತು ಶನಿವಾರ ತಲಾ ನಾಲ್ಕು ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಕಳೆದ ಕೆಲವು ದಿನಗಳಿಂದ ಹೊಸ ಕೊರೋನಾ ಪ್ರಕರಣ ಸಂಖ್ಯೆ 200-300 ನಡುವೆ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.
