Bus Service- ಕರಾವಳಿ ಸಹಜ ಸ್ಥಿತಿಗೆ..?; ಬುಧವಾರದಿಂದ ಮಂಗಳೂರಲ್ಲಿ ಖಾಸಗಿ ಬಸ್ ಸೇವೆ ಆರಂಭ






ಉಡುಪಿ ಮತ್ತು ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಲಾಕ್‌ಡೌನ್ ನಿರ್ಬಂಧ ಹಂತ ಹಂತವಾಗಿ ತೆರವಾಗಲಿದೆ.



ಮುಂದಿನ ಬುಧವಾರದಿಂದ ಖಾಸಗಿ ಬಸ್ ಸೇವೆ ಹಂತ ಹಂತವಾಗಿ ತನ್ನ ಸೇವೆ ಆರಂಭವಾಗುವ ಸೂಚನೆ ಲಭ್ಯವಾಗಿದೆ.



ಮೂಡಬಿದಿರೆಯಲ್ಲಿ ನಡೆದ ಖಾಸಗಿ ಬಸ್ ಮಾಲಕರ ಸಭೆಯಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಹಾಗೂ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಹೇಳಿದ್ದಾರೆ.



ಸಂಕಷ್ಟದಿಂದ ಬಳಲುತ್ತಿರುವ ಖಾಸಗಿ ಬಸ್ ಮಾಲಕರಿಗೆ ತೆರಿಗೆ ರಿಯಾಯಿತಿ ಸಹಿತ ಲಾಕ್‌ಡೌನ್ ಪ್ಯಾಕೇಜ್ ನೀಡುವಂತೆ ಉಭಯ ಬಸ್ ಮಾಲಕರ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.



ಗುರುವಾರದಿಂದ ಮಣಿಪಾಲ, ಕುಂದಾಪುರ, ಹುಬ್ಬಳ್ಳಿ ಮತ್ತು ಹೈದರಾಬಾದ್‌ ಸಹಿತ ವಿವಿಧೆಡೆ ಮಂಗಳೂರಿನಿಂದ ಬಸ್ ಸೇವೆ ಆರಂಭವಾಗಲಿದೆ. ಇದೇ ವೇಳೆ, ಮಂತ್ರಾಲಯಕ್ಕೂ ಬಸ್ ಸೇವೆ ಆರಂಭವಾಗುವ ಸೂಚನೆ ಇದೆ.