Human Rights ಪೊಲೀಸ್ ಲಾಠಿ ಪ್ರಹಾರ: ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ




ರಾಜ್ಯ ಸರ್ಕಾರ ಘೋಷಿಸಿದ ಲಾಕ್ ಡೌನ್ ಸಂದರ್ಭದಲ್ಲಿ ತುರ್ತು ಕೆಲಸ, ವೈದ್ಯಕೀಯ ಸೇವೆ ನೀಡುವ ಅಥವಾ ಇತರ ಯಾವುದೇ ಅಗತ್ಯ ಸಂಬಂಧ ತೆರಳುವಾಗ ಪೊಲೀಸರು ತಡೆದು ಹಲ್ಲೆ ಮಾಡಿದ್ದರೆ ಸಂತ್ರಸ್ತರು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಲಿಖಿತವಾಗಿ ದೂರು ಸಲ್ಲಿಸಬಹುದು.

ಆ ಸಂದರ್ಭದ ಹಲ್ಲೆ ಮಾಡುವ ದೃಶ್ಯಗಳು ಇದ್ದರೆ, ಆ ದೃಶ್ಯ ಸಹಿತ ದೂರಿನೊಂದಿಗೆ ರಾಜ್ಯ ಮಾನವ ಹಕ್ಕು ಅಯೊಗಕ್ಕೆ ಸಲ್ಲಿಸಬಹುದು.


ದೂರು ನೀಡಿದ ಕೂಡಲೇ ತಪ್ಪಿಸ್ಥರ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಮಾನವ ಹಕ್ಕುಗಳ ಆಯೋಗದ ಪ್ರಕಟಣೆ ತಿಳಿಸಿದೆ.


ಹೆಚ್ಚಿನ ವಿವರಗಳಿಗಾಗಿ : 080-22392200 ಸಂಪರ್ಕಿಸಿ.

E-Mail: registrar-kshrc@karnataka.gov.in ಅಥವಾ ಶುಲ್ಕರಹಿತ ಸಹಾಯವಾಣಿ: 180042523333 ಸಂಪರ್ಕಿಸಿ ದೂರು ಸಲ್ಲಿಸಬಹುದು.