-->

A tale of homo sex in Yakshagana - "ಯಕ್ಷಗಾನಕ್ಕೆ ಅಂಟಿದ ಸಲಿಂಗ ಕಾಮವೆಂಬ ಕಳಂಕ"- ಯಕ್ಷ ಪ್ರೇಮಿಯ ನೋವಿನ ಕಥೆ

A tale of homo sex in Yakshagana - "ಯಕ್ಷಗಾನಕ್ಕೆ ಅಂಟಿದ ಸಲಿಂಗ ಕಾಮವೆಂಬ ಕಳಂಕ"- ಯಕ್ಷ ಪ್ರೇಮಿಯ ನೋವಿನ ಕಥೆ





ನನ್ನ ಮಗನಿಗೆ ಇಂದು ಒಬ್ಬ ತರುಣ ವೇಷದಾರಿಯ ಅಸಭ್ಯ ಮೆಸೇಜ್ ಬಂದಿತ್ತು.ನನಗೆ ತೋರಿಸಿದ.


ಇದನ್ನು ನೋಡಿದಾಗ ತುಂಬಾ ನೋವಾಯಿತು.ನಾನು ತುಂಬಾ ಪ್ರೀತಿಸಿದ ಕಲೆಯಾದ ಯಕ್ಷಗಾನದ ಮರಿಯಾದಿ ಇಂತವರಿಂದ ಹೋಗುತ್ತದಲ್ಲಾ ಎಂದೆನಿಸಿತು.


ಪ್ರೇಕ್ಷಕರು ಇಂತವರಲ್ಲಿ ಎಚ್ಚರದಲ್ಲು ಇರಬೇಕೆಂಬ ಕಾರಣದಲ್ಲಿ ನನ್ನ ಹಳೆಯ ಅನುಭವಗಳ ಸಹಿತ ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ.


ನಾನೊಬ್ಬ ತೆಂಕುತಿಟ್ಟಿನ ಅಭಿಮಾನಿ. ಹಾಗೆಂದು ಬಡಗಿನ ದ್ವೇಷಿಯಲ್ಲ.

ನಮ್ಮೂರಿಗೆ ತೆಂಕುತಿಟ್ಟಿನ ಮೇಳ ಬಂತೆಂದಾದರೆ ಕಲಾವಿದರಿಗೆ ನಮ್ಮ ಮನೆಯಲ್ಲಿ ಬಿಡಾರವೆಂಬುದು ಪ್ರತೀತಿ ‌.ಇದು ಸುಮಾರು 15 ವರುಷ ಹಿಂದಿನ ಕಥೆ ಇರಬಹುದು.


ತೆಂಕುತಿಟ್ಟಿನ ಮೇಳಗಳ ರಾಜನೆನಿಸಿದ ಮೇಳ ನಮ್ಮೂರಿಗೆ ಬಂದಿತ್ತು .ಎಂದಿನಂತೆಯೆ ಮೇಳದ ವಾಹನ ಬಂದ ತಕ್ಷಣ ಕಲಾವಿದರನ್ನು ಕರೆತರುವುದಕ್ಕಾಗಿ ಧಾವಿಸಿದೆ.

ನನ್ನ ಪರಿಚಿತ ಗೌರವಾನ್ವಿತ ಕಲಾವಿದರೊಡನೆ ಮನೆಗೆ ಬಂದೆವು.


ಸ್ನಾನಾದಿಗಳನ್ನು ಪೂರೈಸಿ, ಚಹ ಕುಡಿದು ಮಾತಿಗಿಳಿದೆವು. ತೆಂಕುತಿಟ್ಟಿನ ಹಿರಿಯ ಕಲಾವಿದರು,ದೇವಿ,ರಕ್ತಬೀಜ,ಹಿರಣ್ಯಾಕ್ಷ,ಮಧು,ಬಾಹುಕ,ಮುಂತಾದ ಪಾತ್ರಗಳಿಗೆ ಜೀವ ಕೊಟ್ಟ ಕಲಾವಿದರು ಆ ದಿನ ನಮ್ಮ ಮನೆಗೆ ಬಂದಿದ್ದರು. (ನಮ್ಮ ಭಾಗ್ಯ ಎಂದು ಗ್ರಹಿಸಿದ್ದೆ)


ನನ್ನ ಮಗ ಆಗ 4 ನೇ ತರಗತಿಯಲ್ಲೇನೊ ಓದುತ್ತಿದ್ದ. ಅವನು ನನ್ನ ಪಕ್ಕದಲ್ಲಿ ಬಂದು ಕುಳಿತ. ಅವನನ್ನು ಬಹಳ ಪ್ರೀತಿಯಿಂದ ಆ ಹಿರಿಯ ಕಲಾವಿದರು ಕರೆದು ಅವರ ಪಕ್ಕದಲ್ಲಿ ಕೂರಿಸಿದರು. ಮಾತು ಮುಗಿಸಿ ಕಲಾವಿದರಿಗೆ ಮಲಗಲು ವ್ಯವಸ್ಥೆ ಮಾಡಿ ನಾನು ತೋಟಕ್ಕೆ ಹೊರಟೆ.ಸಲ್ಪ ಹೊತ್ತಿನಲ್ಲಿ ನನ್ನ ಮಗ ಅಳುತ್ತಾ ಬಂದ.ಅಪ್ಪ ಆ ವೇಷ ಮಾಡುವ ಅಜ್ಜ ನನ್ನ ಚಡ್ಡಿ ವಳಗೆ ಕೈ ಹಾಕಿ ಏನೆಲ್ಲ ಮಾಡ್ತಾರೆ ಅಂದ.


ಆದರೆ ನಾನು ನಂಬಲೇ ಇಲ್ಲ.ಬದಲಾಗಿ ಮಗನನ್ನೆ ಬೈದು ಕಳಿಸಿದೆ. ಇಷ್ಟು ಪ್ರಾಯವಾದ ಕಲಾವಿದರು ಹಾಗೆ ಮಾಡರು ಎಂದು ನನ್ನ ವಿಶ್ವಾಸ.


ಮತ್ತೆ ಮಗ ಅವರ ಬಳಿ ಹೋಗಲಿಲ್ಲ.


ರಾತ್ರೆ ಆಟ ನೋಡಲು ಹೋದೆವು.


ನಾವು ಹೋಗುವಾಗ ಈ ಕಲಾವಿದರು ದೂರದಲ್ಲಿ ವೇಷ ಮಾಡಿ ಕುಳಿತಿದ್ದಾರೆ .ಅವರ ಬಳಿಯಲ್ಲಿ ಹಲವು ಮಕ್ಕಳಿದ್ದಾರೆ.ಒಬ್ಬ ಹುಡುಗನನ್ನು ಅವರ ತೊಡೆಯ ಮೇಲೆ ಕೂರಿಸಿದ್ದಾರೆ.ಅರೆ ಬೆಳಕು ಇದ್ದ ಜಾಗ.ಸೂಕ್ಷ್ಮವಾಗಿ ಗಮನಿಸಿದರೆ ಆ ಕಲಾವಿದರ ಕೈ ಈ ಹುಡುಗನ ಚಡ್ಡಿಯ ವಳಗಿದೆ.ಆ ಕಲಾವಿದರು ರಂಗಸ್ಥಳಕ್ಕೆ ಹೋದ ನಂತರ ಆ ಹುಡುಗನಲ್ಲಿ ಕೇಳಿದೆ ಆ ವೇಷ ನಿನಗೆ ಏನು ಮಾಡಿದ್ರು ಅಂತ.


ನಾಚಿಕೆಯಿಂದ ನಕ್ಕು ಓಡಿದ .ಪುಟ್ಟ ಹುಡುಗ ಮತ್ತೇನು ಮಾಡಿಯಾನು.

ಇದನ್ನು ಅದೇ ಮೇಳದ ಮತ್ತೊಬ್ಬ ಕಲಾವಿದರಲ್ಲಿ ಹೇಳಿದೆ.ಆಗ ಅವರು ಬಹಳ ಬೇಸರದಿಂದ ಹೇಳಿದರು. ಹೌದು ಆ ಕಲಾವಿದನಿಗೆ ಆ ಹುಚ್ಚು ಜೋರು ಉಂಟು ಎಲ್ಲಾ ಕಡೆಗಳಲ್ಲೂ ಮಕ್ಕಳು ಸಿಕ್ಕಿದ್ರೆ ಹೀಗೆ ಮಾಡ್ತಾರೆ.


ಮೇಳದಲ್ಲಿರುವ ಮಕ್ಕಳನ್ನು ಬಿಡೂದಿಲ್ಲ ಅಂದರು.


ಅದೆ ಕೊನೆ ನಮ್ಮ ಮನೆಗೆ ಕಲಾವಿದರನ್ನು ಕರೆಸೂದು.


ಇತ್ತೀಚೆಗೆ ಕಲಾವಿದರೊಬ್ಬರಲ್ಲಿ ಆ ಕಲಾವಿದರ ಬಗ್ಗೆ ವಿಚಾರಿಸಿದಾಗ "ಆ ಕಲಾವಿದರು ನಮ್ಮ ಮೇಳ ಬಿಟ್ಟು ಐದಾರು ವರುಷ ಕಳೆಯಿತು. ನಂತರ ಇನ್ನೊಂದು ಪ್ರಸಿದ್ದ ಮೇಳಕ್ಕೆ ಹೋದರು .ಅಲ್ಲಿ ಇವರ ಈ ದುಷ್ಚಟದ ಕಾರಣದಿಂದಲೇ ಹೊರದಬ್ಬಿದ್ದಾರಂತೆ.

ಅವರ ಮನೆಯವರು ಅವರನ್ನು ಈ ಕಾರಣದಿಂದಲೇ ಹೊರ ಹಾಕಿದ್ದಾರೆಂದು ಸುದ್ದಿ ಇದೆ. ಎಂದು ತಿಳಿಸಿದರು.ಇದನ್ನು ಕೇಳಿದಾಗ ಬಹಳ ನೋವಾಯ್ತು.ರಂಗದಲ್ಲಿ ಅದ್ಬುತ ಕಲಾವಿದರಾಗಿ ಮೆರೆದು .ವೈಯಕ್ತಿಕ ದುಷ್ಚಟದಿಂದ ಯಕ್ಷಗಾನದ ಮರಿಯಾದಿಯೊಂದಿಗೆ ಅವರ ಮರಿಯಾದೆಯು ತೆಗೆದು ಕೊಳ್ತಾರಲ್ಲ ಎಂಬ ನೋವು.


ಇದನ್ನು ನನ್ನ ಸ್ನೇಹಿತನಲ್ಲಿ ಹೇಳಿಕೊಂಡಾಗ, ಆತ ಅವನಿಗಾದ ಒಂದು ಅನುಭವವನ್ನು ಹೇಳಿದ.


ಹೆಸರಾಂತ ಒಂದು ತುಳುತಿಟ್ಟಿನ ಮೇಳವಂತೆ.ತುಳುವಿನ ಸ್ತ್ರೀ ವೇಷಗಳಲ್ಲಿ ಬಹಳ ಹೆಸರು ಗಳಿಸಿದ ಒಬ್ಬ ಕಲಾವಿದನಂತೆ ,ಸ್ತ್ರೀ ವೇಷದ ಮೇಕಪ್ ಮಾಡಿ ,ಎದೆಗೆ ಎತ್ತರ ಕಾಣುವಂತೆ ಎಂತದೊ ಕಟ್ಟಿ, ರವಿಕೆ ಹಾಗು ಲಂಗ ಮಾತ್ರ ಹಾಕಿ ಬಣ್ಣದ ಮನೆಯ ಹೊರಗೆ ಕುಳಿತು ಬರುವ ಹುಡುಗರನ್ನು ತನ್ನತ್ತ ಆಕರ್ಷಿಸುತ್ತಾ ಇದ್ದನಂತೆ.ಇವರನ್ನು ಕರೆದು ಪರಿಚಯ ಎಲ್ಲ ಕೇಳಿ,ನೀವು ಯಾವುದರಲ್ಲಿ ಬಂದದ್ದು ಅಂತ ಕೇಳಿದರಂತೆ,ಇವರು ಕಾರಲ್ಲಿ ಅಂತ ಉತ್ತರಿಸಿದರು.


ನನ್ನ ವೇಷ ಬೇಗ ಮುಗಿತದೆ,ಮತ್ತೆ ಆಟವು ಇಂಟ್ರೆಸ್ಟಿಂಗ್ ಇಲ್ಲ.ನಾವು ಕಾರಲ್ಲಿ ಮಲಗುವನ ಅಂತ ಕೇಳಿದರಂತೆ.ಇವನಿಗೆ ಆ ಮಾತು ಕೇಳಿ ಏನು ಮಾಡಬೇಕೆಂದು ತೋಚದೆ ನಾನು ಆಟ ನೋಡ್ತೇನೆ ಅಂತ ಹೋದನಂತೆ.ಕೊನೆಗೆ ಆಟ ನೋಡಲೂ ಅಸಹ್ಯ ಆಗಿ ಮನೆಗೆ ಹೋದೆ ಎಂದ.


ಇದು ಒಂದಾದರೆ ಇದೆ ರೀತಿಯ ಅನುಭವ ನನ್ನ ಭಾವನಿಗೆ ಆಗಿದೆಯಂತೆ.

ನನ್ನ ಭಾವನು ಹವ್ಯಾಸಿ ಕಲಾವಿದ.


ಹಾಗಾಗಿ ಅವರ ಮನೆಗೆ ಕಲಾವಿದರು ಬರುತ್ತಿರುತ್ತಾರೆ.


ಪ್ರತಿಷ್ಟಿತ ಮೇಳವೊಂದರ ಆಟ ಅವರೂರಲ್ಲೆ .


ಆ ಮೇಳದಲ್ಲಿದ್ದ ಪ್ರಸಿದ್ದ ಸ್ತ್ರೀ ವೇಷದಾರಿಯೊಬ್ಬರು ಇವರ ಮನೆಗೆ ಬಂದಿದ್ದರು.ಅವರು ತೆಂಕಿನ ಹಲವಾರು ಪ್ರಸಿದ್ದ ಮೇಳದಲ್ಲಿ ಅಲ್ಲದೆ,ಬಡಗಿನಲ್ಲು ಹೆಸರುಗಳಿಸಿದವರು.

ಅವರ ಮೇಲೆ ನನ್ನ ಭಾವನಿಗು ಬಹಳ ಅಭಿಮಾನ.ಇವರ ಮನೆಯಲ್ಲೆ ಉಳಿದು ರಾತ್ರೆ ಮೇಳದ ಆಟಕ್ಕೆ ಹೋದರಂತೆ.ಅಲ್ಲಿಗೆ ಭಾವನು ,ಭಾವನ ಮಗನು ಹೋಗಿದ್ದರು.ಭಾವ ಉಳಿದ ಕಲಾವಿದರಲ್ಲಿ ಮಾತನಾಡುತ್ತಿರುವಾಗ ಭಾವನ ಮಗ 8 ನೇ ತರಗತಿಯ ಹುಡುಗ. ಅವನು ಆಗ ನಮ್ಮ ಮನೆಗೆ ಬಂದ ಮಾವ ಅನ್ನುವ ಸಲುಗೆಯಿಂದ ಈ ಕಲಾವಿದರ ಬಳಿ ಹೋಗಿ ಮಾತನಾಡುತ್ತಿದ್ದನಂತೆ.ಬಣ್ಣದ ಮನೆಯ ಹೊರಗೆ.ಆದರೆ ಅವರು ಈ ಹುಡುಗನ ಮೇಲೆಲ್ಲಾ ಕೈಯಾಡಿಸಿ ಅಸಭ್ಯವಾಗಿ ನಡೆದುಕೊಂಡರಂತೆ.

ಹುಡುಗ ಮನೆಗೆ ಬಂದು ಅಮ್ಮನಲ್ಲಿ ವಿಚಾರ ತಿಳಿಸಿದಾಗ ಗೊತ್ತಾಯಿತು.

ಮತ್ತೆ ಬೇರೆ ಕಲಾವಿದರಲ್ಲಿ ತಿಳಿದಾಗಲೆ ವಿಚಾರ ತಿಳಿದದ್ದು ‌.ಆ ಕಲಾವಿದರು ಇರುವ ಮೇಳದಲ್ಲಿ ಚಿಕ್ಕ ವೇಷ ಮಾಡಲು ಮಕ್ಕಳು ಬರಲು ಹೆದರುತ್ತಾರೆಂದು.

ಆದರು ನನ್ನ ಭಾವನಿಗೆ ಬುದ್ದಿ ಬರಲಿಲ್ಲ.


ಹೀಗೆ ಅವರ ಮನೆಗೆ ಮಳೆಗಾಲ ಭಾಗವತರೊಬ್ಬರು ಆಟದ ಟಿಕೇಟು ತಂದಿದ್ದರಂತೆ.ನನ್ನ ಮಗನ ವಿಧ್ಯಾಭ್ಯಾಸಕ್ಕಾಗಿ ಆಟ ಆಡಿಸುತ್ತಿದ್ದೇನೆ ಎಂದೆಲ್ಲಾ ಹೇಳಿ ಕರುಣೆ ಗಿಟ್ಟಿಸಿಕೊಂಡು ಮಧ್ಯಾಹ್ನದ ಊಟವನ್ನೂ ಅಲ್ಲೇ ಮಾಡಿ.


ಊಟ ಬಡಿಸಿದ ನನ್ನ ಭಾವನ ಹೆಂಡತಿಯಲ್ಲೆ ಅಸಭ್ಯವಾಗಿ ಮಾತನಾಡಿದರಂತೆ.ಆದರೆ ಅದನ್ನು ಆಕೆ ತಿಳಿಸಿದ್ದು ಆ ಭಾಗವತರು ಹೋದ ನಂತರದಲ್ಲಿ .ಅಲ್ಲದಿದ್ದರೆ ಅಲ್ಲಿಯೇ ಅವರಿಗೆ ಸಹಸ್ರನಾಮ ಆಗುತ್ತಿತ್ತು.


ಹೀಗೆ ಈ ವಿಚಾರವನ್ನು ತೆಂಕುತಿಟ್ಟಿನ ಗೌರವಾನ್ವಿತ ಹಿರಿಯ ಕಲಾವಿದರೊಬ್ಬರಲ್ಲಿ ಮಾತನಾಡಿದೆ.

ಆಗ ಅವರು ಹೇಳಿದ ವಿಚಾರ ಬಹಳ ಭಯ ತಂತು.


ಈಗ ಯಕ್ಷಗಾನದಲ್ಲಿ ಸಲಿಂಗ ಕಾಮ ಅನ್ನುವುದು ಕಾಮನ್ ಆಗಿದೆ.


ಸ್ತ್ರೀ ವೇಷದವರು ಇನ್ನೊಂದು ವೇಷದ ಕಲಾವಿದರು ಜೊತೆಯಾಗಿಯೆ ಇರುವುದು ಹೆಚ್ಚಾಗಿದೆ. ಕಲಾವಿದರು ಈ ಮೇಳ ಬಿಟ್ಟು ಇನ್ನೊಂದು ಮೇಳಕ್ಕೆ ಹೋಗುವುದಿದ್ದರೂ ಒಂದಕ್ಕೆ ಒಂದು ಉಚಿತ ಎಂಬಂತೆ ಎರಡು ಕಲಾವಿದರು ಜೊತೆಯಾಗಿಯೇ ಹೋಗುವುದು.ಆಟ ಮುಗಿಸಿ ಹೋಟೇಲ್ ರೂಮ್ ಮಾಡಿ ಮಲಗುವುದು.ಜೊತೆಯಾಗಿಯೆ ತಿರುಗಾಡುವುದು.


ಕೆಲವು ಹಿರಿಯ ಕಲಾವಿದರಿಗೆ ಅನುಕೂಲರಾಗಿರುವ ಸಣ್ಣ ಕಲಾವಿದರು ಬೇಗ ದೊಡ್ಡ ಕಲಾವಿದರಾಗುತ್ತಾರಂತೆ.


ಆ ಕಲಾವಿದರಿಗೆ ದೊಡ್ಡ ವೇಷ, ವಿಶೇಷ ಬತ್ತೆ ಎಲ್ಲ ಸಿಗುತ್ತದಂತೆ.


ಕೆಲವು ಕಲಾವಿದರು ಹೀಗೆ ಬುಟ್ಟಿಗೆ ಹಾಕಿಕೊಂಡು ಅವರ ಕೈಯಿಂದ ಹಣ,ಡ್ರೆಸ್ ಮುಂತಾದದ್ದನ್ನು ವಸೂಲಿ ಮಾಡುವುದು ಇದೆಯಂತೆ.


ಹೊಟ್ಟೆಪಾಡಿಗಾಗಿ ಮೇಳಕ್ಕೆ ಬಂದ ಎಷ್ಟೊ ಕಿರಿಯ ಕಲಾವಿದರು ಈ ಹಿರಿಯ ಕಲಾವಿದರ ಹುಚ್ಚಿಗೆ ಬಲಿಯಾಗಿ ಸಂಕಟ ಪಡುತ್ತಾರೆ.ಕೆಲವರು ಮೇಳದಿಂದ ದೂರವಾಗುತ್ತಾರೆ.ಕೆಲವರು

ತಾನು ಈ ದುಷ್ಚಟ ಹಿಡಿಸಿಕೊಂಡು ಹಾಳಾಗುತ್ತಾರೆ.


ಕಲಾವಿದರಿಗಿರುವ ಹೆಣ್ಣು ಹುಚ್ಚು, ಗಂಡು ಹುಚ್ಚು, ಕಳ್ಳತನದಂತಹ ಚಟದಿಂದ ನಮ್ಮಂತವರನ್ನೂ ಕೆಲವರು ಸಂಶಯದ ಓರೆ ಕಣ್ಣಲ್ಲಿ ಕಾಣುವ ಹಾಗೆ ಆಗಿದೆ .

ಎಂದು ಆ ಹಿರಿಯ ಕಲಾವಿದರು ಬಹಳ ದುಃಖ ದಿಂದ ಹೇಳಿದ್ರು.


ಹೀಗೆ ನನ್ನ ಒಡನಾಟದ ಹಲವು ಹಿರಿಯ ಗೌರವಾನ್ವಿತ ಕಲಾವಿದರಲ್ಲಿ ಮಾತನಾಡುತ್ತಿರುವಾಗ ಹಲವು ವಿಚಾರಗಳು ಬೆಳಕಿಗೆ ಬಂದವು.


ಕಲಾವಿದರ ವೇಷಗಳನ್ನು ನೋಡಿ ಅಭಿಮಾನದಿಂದ ಪೇಸ್ ಬುಕ್ಕಿನಲ್ಲೊ ಇನ್ನೊಂದರಲ್ಲೋ ಸಂದೇಶ ಕಳುಹಿಸಿದ ಹಲವಾರು ಹೆಂಗಸರಲ್ಲಿ ಅಶ್ಲೀಲವಾಗಿ ಮಾತನಾಡಿದ ಕೆಲವು ಪ್ರಸಿದ್ದ ಕಲಾವಿದರು. ಅಭಿಮಾನದಿಂದ ಹಿರಿಯ ಕಲಾವಿದರನ್ನು ಮನೆಗೆ ಕರೆದುಕೊಂಡು ಹೋದ ಕಿರಿಯ ಕಲಾವಿದನ ಸಹೋದರಿಯಲ್ಲೇ ಅಸಭ್ಯವಾಗಿ ನಡೆದುಕೊಂಡ ಹಿರಿಯ ಕಲಾವಿದ.

ರಂಗದಲ್ಲಿ ಗಂಡ ಹೆಂಡಿರಾಗಿ ಕಾಣಿಸಿ,ವೇಷ ತೆಗೆದ ನಂತರವೂ ಅದೇ ರೀತಿಯ ವ್ಯವಹಾರ ಹೆಸರಾಂತ ಮೇಳಗಳಲ್ಲೂ ನಡೆಯುತ್ತಿದೆಯಂತೆ.


ಇತ್ತೀಚೆಗೆ ಬಡಗು ತಿಟ್ಟಿನ ಭಾಗವತರೊಬ್ಬರು ಸತ್ತದ್ದು ಈ ಚಟದಿಂದಲೆ.

ಹೆಚ್ಚಿನ ಮೇಳಗಳಲ್ಲೂ ಈ ರೀತಿಯ ಗಂಡು ಹುಚ್ಚರು ಇದ್ದಾರಂತೆ.

ತಾನು ಮೇಳದಲ್ಲಿ ದುಡಿದ ಹಣ ಕೆಲವೊಮ್ಮೆ ಸ್ವಂತ ಹೆಂಡತಿ, ಮಕ್ಕಳಿಗೆ ಸಿಗದೆ ಎಲ್ಲವನ್ನು ಈ ಗಂಡು ಹೆಂಡತಿಗೆ ಸುರಿಯುವವರು ಇದ್ದಾರಂತೆ.

ಬಹಳ ವಿಧ್ವಾಂಸರು ಎನಿಸಿಕೊಂಡವರ ಹೆಸರನ್ನು ಸಹ ಇಂತಹ ಹುಚ್ಚಿನಲ್ಲಿ ಇದ್ದಾರೆ ಎಂದು ಕೇಳಿದಾಗ ಅಷ್ಚರ್ಯವು ,ಬೇಸರವು ಆಯ್ತು.

ಇಂತವರಿಂದ ಯಾವುದೇ ದುಷ್ಚಟಕ್ಕೆ ಬೀಳದೆ ಕಲಾಮಾತೆಯ ಸೇವೆ ಮಾಡುತ್ತಿರುವ ಕಲಾವಿದರಿಗೆ ಬಹಳ ಕಷ್ಟ.

ಈ ವಿಚಾರವನ್ನು ಬಹಳ ನೋವಿನಿಂದ ನಿಮ್ಮಲ್ಲಿ ಹಂಚಿಕೊಂಡಿದ್ದೇನೆ.


ಯಕ್ಷಗಾನ ಮೇಳ ಮತ್ತು ಹಲವು ಕಲಾವಿದರ ವೇಷದ ಮೇಲಿರುವ ಗೌರವದಿಂದಾಗಿ ನನಗಾದ ಅನುಭವದಲ್ಲಿ ಕಲಾವಿದರ ಹೆಸರನ್ನು ಹಾಕಲಿಲ್ಲ.ಇದನ್ನು ಸುಳ್ಳು ಎಂದು ವಾದಿಸುವವರಿದ್ದರೆ ಇಂತಹ ಹಲವು ಕಲಾವಿದರ ಹುಚ್ಚನ್ನು ಬಹಿರಂಗವಾಗಿ ಹೇಳಿಯೇನು.

ಈ ಮೂಲಕ ನನ್ನ ಕೋರಿಕೆ ಇಷ್ಟೆ.ದಯಮಾಡಿ ಇಂತ ದುಷ್ಚಟದಿಂದ ದೂರವಾಗಿ ಯಕ್ಷಗಾನದ ಮರಿಯಾದೆಯನ್ನು ಉಳಿಸಿ..🙏

(ಇದು ನಮಗೆ ಒಂದು ಯಕ್ಷಗಾನದಲ್ಲಿ ಕಂಡಿದೆ.ಇಂತಹ ಹುಚ್ಚು ವಿವಿದ ಕಲಾ ಪ್ರಕಾರಗಳಲ್ಲೂ ಇರಲೂ ಬಹುದು.)

Ads on article

Advertise in articles 1

advertising articles 2

Advertise under the article