-->
Azad, Sibal out from star campaigners list | ಕೈ ಪಾಳಯದಿಂದ ಸಿಬಲ್, ಗುಲಾಂ ನಬಿ ದೂರ?: ಚರ್ಚೆಗೆ ಕಾರಣವಾದ ಕೈ ತಾರಾ ಪ್ರಚಾರಕರ ಪಟ್ಟಿ

Azad, Sibal out from star campaigners list | ಕೈ ಪಾಳಯದಿಂದ ಸಿಬಲ್, ಗುಲಾಂ ನಬಿ ದೂರ?: ಚರ್ಚೆಗೆ ಕಾರಣವಾದ ಕೈ ತಾರಾ ಪ್ರಚಾರಕರ ಪಟ್ಟಿ

ಕೈ ಪಾಳಯದಿಂದ ಸಿಬಲ್, ಗುಲಾಂ ನಬಿ ದೂರ?

ಚರ್ಚೆಗೆ ಕಾರಣವಾದ ಕೈ ತಾರಾ ಪ್ರಚಾರಕರ ಪಟ್ಟಿ


ಜಿ-23 ಎಂದು ಬಣ್ಣಿಸಿಕೊಂಡ ನಾಯಕರು ಈಗ ಕಾಂಗ್ರೆಸ್‌ಗೆ ಅಪಥ್ಯವಾಗಿದ್ದಾರೆ. ಕಳೆದ ಆಗಸ್ಟ್‌ ತಿಂಗಳಿನಲ್ಲಿ ಸೋನಿಯಾ ಗಾಂಧಿಗೆ ನೇರವಾಗಿ ಪತ್ರ ಬರೆದು ಪಕ್ಷದ ಸಂಘಟನಾತ್ಮಕ ಬದಲಾವಣೆಗೆ ಪಟ್ಟು ಹಿಡಿದ ಈ ಭಿನ್ನಮತೀಯರ ಗುಂಪಿನ ನಾಯಕರಾದ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಮತ್ತು ಆನಂದ ಶರ್ಮಾ ಅವರಂದ ಪ್ರಮುಖ ನಾಯಕರು ಕೈ ಪಾಳಯದಿಂದ ದೂರ ಸರಿಯುತ್ತಿದ್ದಾರೆಯೇ...?


ಹೀಗೊಂದು ಅನುಮಾನದ ಸುಳಿ ರಾಜಕೀಯ ವಲಯದಲ್ಲಿ ತಿರುಗುತ್ತಿದೆ. ಇದಕ್ಕೆ ಕಾರಣವೂ ಇದೆ... ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಸಮರದ ಸಂದರ್ಭದಲ್ಲಿ ಕೈ ಪಾಳಯದ ತಾರಾ ಪ್ರಚಾರಕರ ಪಟ್ಟಿಯಿಂದ ಅವರನ್ನು ಹೊರದಬ್ಬಲಾಗಿದೆ. ಈ ಪಟ್ಟಿಯಲ್ಲಿ ಅವರಿಗೆ ಸ್ಥಾನ ನೀಡಿಲ್ಲ. ಆದರೆ, ಜಿ-23 ಎಂದು ಬಣ್ಣಿಸಿಕೊಂಡ ನಾಯಕರ ಪೈಕಿ ಜಿತಿನ್ ಪ್ರಸಾದ ಮತ್ತು ಅಖಿಲೇಶ್ ಪ್ರಸಾದ್ ಸಿಂಗ್ ಅವರಿಗೆ ತಾರಾ ಪ್ರಚಾರಕರಾಗಿ ಸ್ಥಾನ ಕಲ್ಪಿಸಲಾಗಿದೆ.


ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್, ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧುರಿ, ಎಐಸಿಸಿಯ ಬಿ.ಕೆ. ಹರಿಪ್ರಸಾದ್, ಸಲ್ಮಾನ್ ಖುರ್ಷೀದ್, ಸಚಿನ್ ಪೈಲಟ್, ರಣದೀಪ್ ಸಿಂಗ್ ಸುರ್ಜೇವಾಲಾ, ಆರ್.ಪಿಎಸ್. ಸಿಂಗ್ ಮತ್ತು ನವಜ್ಯೋತ್ ಸಿಂಗ್ ಸಿಧು ಅವರಿಗೆ ಕೈ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.


ಪಶ್ಚಿಮ ಬಂಗಾಳದ ಕೈ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕ್ರಿಕೆಟ್ ತಾರೆ ಮೊಹಮ್ಮದ್ ಅಜರುದ್ದೀನ್, ಪವನ್ ಖೇರಾ, ಜೈವೀರ್ ಶೇರ್ಗಿಲ್, ಅಭಿಜಿತ್ ಮುಖರ್ಜಿ ಮತ್ತು ದೀಪೇಂದರ್ ಹೂಡ ಅವರ ಹೆಸರು ಇದೆ.


Ads on article

Advertise in articles 1

advertising articles 2

Advertise under the article