-->

CID SP to head investigation | ಸಿಸಿಬಿ ಪೊಲೀಸರ ಅಕ್ರಮ ಐಷಾರಾಮಿ ಕಾರು ಮಾರಾಟ ಪ್ರಕರಣ; ತನಿಖೆ ಎಸ್‌ಪಿ ಮಟ್ಟದ ಅಧಿಕಾರಿಗೆ!

CID SP to head investigation | ಸಿಸಿಬಿ ಪೊಲೀಸರ ಅಕ್ರಮ ಐಷಾರಾಮಿ ಕಾರು ಮಾರಾಟ ಪ್ರಕರಣ; ತನಿಖೆ ಎಸ್‌ಪಿ ಮಟ್ಟದ ಅಧಿಕಾರಿಗೆ!





ಮಂಗಳೂರು: ಮಂಗಳೂರು ನಗರ ಪೊಲೀಸ್ ನಿಕಟಪೂರ್ವ ಆಯುಕ್ತರೂ ಭಾಗಿಯಾಗಿದ್ದಾರೆ ಎನ್ನಲಾದ ಸಿಸಿಬಿ ಪೊಲೀಸರ ಅಕ್ರಮ ಐಷಾರಾಮಿ ಕಾರು ಮಾರಾಟ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.


 ಈ ಪ್ರಕರಣದ ತನಿಖೆ ದಿಕ್ಕುತಪ್ಪಿದೆ ಎಂದು ಹೇಳಲಾಗಿದ್ದು, ಈ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಐಡಿ ಎಸ್‌ಪಿ ಮಟ್ಟದ ಅಧಿಕಾರಿಗೆ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.



ಸಿಐಡಿ ಎಸ್.ಪಿ. ರಮೇಶ್ ಎಂಬವರು ಕೆಲ ದಿನಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.



ರೋಹಿಣಿ ಕಟ್ಟೋಚ್ ಅವರ ಬದಲು ತನಿಖೆಯ ಹೊಣೆಯನ್ನು ಎಸ್‌ಪಿ ರಮೇಶ್ ಅವರಿಗೆ ನೀಡಲಾಗಿದೆ. ಸಮಗ್ರ ತನಖೆಗಾಗಿ ಅವರು ಮಂಗಳೂರಿಗೂ ಆಗಮಿಸಿ ಆರೋಪಿಗಳ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.


ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅದಕ್ಕೆ ನೆರವಾದವರಿಗೆ ನೊಟೀಸ್ ನೀಡಿದ್ದು ವಿಚಾರಣೆ ನಡೆದಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ನೀಡಿದ ತನಿಖಾ ವರದಿಯ ಆಧಾರದಲ್ಲಿ ನಾಲ್ವರನ್ನು ಈಗಾಗಲೇ ಸೇವೆಯಿಂದ ಅಮಾನತು ಮಾಡಲಾಗಿದೆ.



ಪ್ರಕರಣದ ವಿವಿಧ ಹಂತದಲ್ಲಿ ವಿಚಾರಣೆ ನಡೆದಿದ್ದು, ಬೆಂಗಳೂರಿನಲ್ಲೂ ಆರೋಪಿ ಪೊಲೀಸರನ್ನು ಕರೆದು ವಿಚಾರಣೆಗೊಳಪಡಿಸಲಾಗಿದೆ.


Ads on article

Advertise in articles 1

advertising articles 2

Advertise under the article