-->

Alvas News | ಆಳ್ವಾಸ್‌ನಲ್ಲಿ ಎನ್‌ಸಿಸಿ ಕೆಡೆಟ್ ಕ್ಯಾಂಪ್‌ ಯಶಸ್ವೀ ಸಮಾರೋಪ

Alvas News | ಆಳ್ವಾಸ್‌ನಲ್ಲಿ ಎನ್‌ಸಿಸಿ ಕೆಡೆಟ್ ಕ್ಯಾಂಪ್‌ ಯಶಸ್ವೀ ಸಮಾರೋಪ





ಮಂಗಳೂರು: ಶಿಸ್ತಿನ ವಾತಾವರಣ ಇರಬೇಕು. ಇದನ್ನು ಕಠಿಣ ಸನ್ನಿವೇಶ ಎಂದು ಭಾವಿಸದೆ, ನಮ್ಮನ್ನು ಮುಂದಿನ ದಿನಗಳಲ್ಲಿ ಸತ್ಪ್ರಜೆಗಳನ್ನಾಗಿ ಮಾಡಲು ದಾರಿದೀಪ ಇದು ಎಂದು ಭಾವಿಸಬೇಕು ಎಂದು ಆಳ್ವಾಸ್ ಕಾಲೇಜಿನ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.



ಆಳ್ವಾಸ್ ಕಾಲೇಜಿನ ಎನ್‌ಸಿಸಿ ನೇವಲ್ ವಿಂಗ್ ಹಾಗೂ ಕರ್ನಾಟಕ ಎನ್‌ಸಿಸಿ ನೇವಲ್ ಯೂನಿಟ್ ಸಯಹೋಗದಲ್ಲಿ ನಡೆದ ಐದು ದಿನಗಳ ಎನ್‌ಸಿಸಿ ಕೆಡೆಟ್ ಕ್ಯಾಂಪಿನ ಸಮಾರೋಪ ಸಮಾರಂಭದ ಆಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.



ಸಾವಧಾನ್ ನ್ನುವ ಪೆರೇಡ್ ಕಾಷನ್ ಕೆಲ ಸಮಯದ ವರೆಗೆ ಮಾತ್ರ ನಮ್ಮಲ್ಲಿರಬಾರದು. ನಿತ್ಯ ನಿರಂತರವಾಗಿ ಈ ಕ್ಯಾಂಪ್‌ನ ಶಿಸ್ತು ನಮ್ಮ ಮನದಲ್ಲಿ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.





ಕಾಲೇಜನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಮುಂದಿನ ಭವಿಷ್ಯ. ಅವರು ಹೆಮ್ಮರವಾಗಲು ಈಗಾಗಲೇ ನೀರು ಕೊಟ್ಟು ಪ್ರೋತ್ಸಾಹಿಸಬೇಕು ಎಂದು ಹೇಳಿದರು.



ಈ ಸಂದರ್ಭದಲ್ಲಿ ನೇವಲ್ ವಿಂಗ್‌ನ ವಾರ್ಷಿಕ ನಿಯತಕಾಲಿಕೆ ನಾವಿಕ-2020ನ್ನು ಬಿಡುಗಡೆ ಮಾಡಲಾಯಿತು.



ಎನ್‌ಸಿಸಿ ನೇವಲ್ ವಿಂಗ್‌ನಲ್ಲಿ ಶ್ರೇಷ್ಠ ಕಾರ್ಯದರ್ಶಕತೆ ರೋರಿದ ಕೆಡೆಟ್ ಕೀರ್ತನಾ ಕೆ.ಶೆಟ್ಟಿ ಅವರಿಗೆ ಕಡೆಟ್ ನಾಯಕ ಎಂದು ಪುರಸ್ಕರಿಲಾಯಿತು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article