-->
Radhika Kumaraswami Photo viral | ಮತ್ತೊಬ್ಬ ಪ್ರಭಾವಿ ರಾಜಕಾರಣಿ ಜತೆ ರಾಧಿಕಾ ಕುಮಾರಸ್ವಾಮಿ: ಫೋಟೋ ವೈರಲ್

Radhika Kumaraswami Photo viral | ಮತ್ತೊಬ್ಬ ಪ್ರಭಾವಿ ರಾಜಕಾರಣಿ ಜತೆ ರಾಧಿಕಾ ಕುಮಾರಸ್ವಾಮಿ: ಫೋಟೋ ವೈರಲ್
ರಾಧಿಕಾ ಕುಮಾರಸ್ವಾಮಿ ಅವರನ್ನು ವಿವಾದ ಬೆನ್ನು ಹತ್ತಿಕೊಂಡು ಬರುತ್ತಿದೆ. ರಾಜಕಾರಣಿಗಳ ಹೆಸರಲ್ಲಿ ಮೋಸ ಮಾಡಿದ್ದ ವಂಚಕ ಜ್ಯೋತಿಷಿ ಯುವರಾಜ್ ಜೊತೆ ಹಣಕಾಸಿನ ಸಂಬಂಧ ಇರಿಸಿಕೊಂಡಿದ್ದ ರಾಧಿಕಾ ಪ್ರಭಾವಿ ರಾಜಕಾರಣಿ ಮುರುಗೇಶ್ ನಿರಾಣಿ ಜೊತೆ ಇರುವ ಫೋಟೋ ಇದೀಗ ವೈರಲ್ ಆಗಿದೆ.ಈ ಮೂಲಕ ವಂಚಕ ಜ್ಯೋತಿಷಿ ಯುವರಾಜ್ ಆಲಿಯಾಸ್ ಸ್ವಾಮಿ ಕೇಸ್‌ಗೆ ಹೊಸ ಟ್ವಿಸ್ಟ್ ದೊರೆತಿದೆ ಎನ್ನಲಾಗಿದೆ.ರಾಧಿಕಾ ಕೆಲ ದಿನಗಳ ಹಿಂದಷ್ಟೇ ಸಿಸಿಬಿ ವಿಚಾರಣೆಯನ್ನು ಎದುರಿಸಿದ್ದರು. ಯುವರಾಜ್ ಅವರನ್ನು 17 ವರ್ಷಗಳಿಂದ ಬಲ್ಲೆ, ಅವರ ಜೊತೆ ನನಗೆ ಹಣಕಾಸಿನ ಸಂಬಂಧ ಇದೆ. ಅವರು ನಮ್ಮ ಕುಟುಂಬದ ಜ್ಯೋತಿಷಿ ಎಂದೆಲ್ಲ ಹೇಳಿದ್ದ ರಾಧಿಕಾ ಅವರನ್ನು ಸಿಸಿಬಿ ಸಾಕಷ್ಟು ಡ್ರಿಲ್ ಮಾಡಿತ್ತು. ಸಿಸಿಬಿ ಕಚೇರಿಯಿಂದ ಹೊರಬಂದಿದ್ದ ರಾಧಿಕಾ, ವಿಚಾರಣೆ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದರು. ಅಲ್ಲದೆ, ವಿಚಾರಣೆಗೆ ಮತ್ತೊಮ್ಮೆ ಕರೆದರೆ ಬರುತ್ತೇನೆ ಎಂದು ಹೇಳಿದ್ದರು.


ಇದೀಗ, ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಜೊತೆ ರಾಧಿಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದು, ವೈರಲ್ ಆಗಿದೆ. ಈ ಭೇಟಿಯಿಂದ ಪ್ರಕರಣಕ್ಕೂ ಟ್ವಿಸ್ಟ್ ಸಿಕ್ಕಿದೆ ಎನ್ನಲಾಗಿದೆ. 

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg