-->
Renukacharya on HDK | ಅನೈತಿಕ ಸಂಬಂಧದಿಂದ ಕುಮಾರಸ್ವಾಮಿ ಸಿಎಂ ಆಗಿದ್ದರು: ರೇಣುಕಾಚಾರ್ಯ

Renukacharya on HDK | ಅನೈತಿಕ ಸಂಬಂಧದಿಂದ ಕುಮಾರಸ್ವಾಮಿ ಸಿಎಂ ಆಗಿದ್ದರು: ರೇಣುಕಾಚಾರ್ಯ

ದಾವಣಗೆರೆ: ಭಯಂಕರ ಮಾತಿಗೆ ಹೆಸರಾದ ಮಾಜಿ ಸಚಿವ ರೇಣುಕಾಚಾರ್ಯ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಸೇರಿ ಕುಮಾರಸ್ವಾಮಿ ಲಾಟರಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅರೇಂಜ್ ಮ್ಯಾರೇಜ್ ಮೂಲಕ ಸಿಎಂ ಆದವರಲ್ಲ. ಬದಲಾಗಿ ಅನೈತಿಕ ಸಂಬಂಧದಿಂದ ಸಿಎಂ ಆದವರು. ಕಾಂಗ್ರೆಸ್ ಶಾಸಕರು ಪಕ್ಷದಿಂದ ಹೊರ ಹೋಗುವಂತೆ ಮಾಡಿದ್ದು ಕಾಂಗ್ರೆಸ್ ಶಾಸಕರು ಎಂದು ಹೇಳಿದರು.ಇದಕ್ಕೂ ಒಂದು ಕಾರಣವಿದೆ ಎಂದು ಹೇಳಿದ ರೇಣುಕಾಚಾರ್ಯ ಅವರು, ಕುಮಾರಸ್ವಾಮಿಯವರು ಈ ಹಿಂದೆ ಇವರಿಗೆ ಮೋಸ ಮಾಡಿದ್ದರು. ಆದರೆ, ಕುಮಾರಸ್ವಾಮಿಯವರಿಗೆ 2006ರಲ್ಲಿ ಬಿಜೆಪಿ ಒಂದು ಅಸ್ತಿತ್ವ ಕೊಟ್ಟಿತ್ತು. ಆಗ ಕುಮಾರಸ್ವಾಮಿ ವಚನಭ್ರಷ್ಟರಾದರು. ವಚನ ಭ್ರಷ್ಟರಾದ ಮೇಲೆ ಕುಮಾರಸ್ವಾಮಿ ಅವರ ರಾಜಕೀಯ ಜೀವನ ಹೀನಾಯವಾಯಿತು ಎಂದು ವ್ಯಂಗ್ಯವಾಡಿದರು.ಕೇವಲ 37 ಸ್ಥಾನ ಪಡೆದು ಕುಮಾರಸ್ವಾಮಿ ಲಾಟ್ರಿ ಮುಖ್ಯಮಂತ್ರಿಯಾದರೂ ಅವರ ಪಕ್ಷದ ಶಾಸಕರೇ ಅವರಿಂದ ಬೇಸತ್ತು ನಮ್ಮ ಪಕ್ಷಕ್ಕೆ ಬಂದರು. ಇದರಿಂದಲೇ ನಾವು ಸರ್ಕಾರ ರಚನೆ ಮಾಡಿದ್ದೇವೆ. ಕುಮಾರಸ್ವಾಮಿಯವರಿಗೆ ಆತ್ಮಾವಲೋಕನ ಮಾಡುವ ಸಮಯ ಈಗ ಬಂದಿದೆ. ಕಾಂಗ್ರೆಸ್ ಸ್ಥಿತಿ ಭಸ್ಮಾಸುರ ಮೋಹಿನಿಯ ಕಥೆಯಂತಾಗಿದೆ ಎಂದು ಅವರು ಕಟಕಿಯಾಡಿದರು.ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಕಲಿ ಹಿಂದೂಗಳು. ನಾವು ಎದೆ ತಟ್ಟಿ ಹೇಳುತ್ತೇವೆ, ನಾವು ಹಿಂದೂತ್ವದ ಪ್ರತಿಪಾದಕರು. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ನಿಷೇಧದ ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ರೇಣುಕಾಚಾರ್ಯ ಸವಾಲು ಹಾಕಿದರು.Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg