Rape by supari killers | ಉದ್ಯಮಿ ಕೊಲೆಗೆ ಬಂದವ್ರು ಮಹಿಳಾ ಸಿಬ್ಬಂದಿ ರೇಪ್ ಮಾಡಿದ್ರು: ಇದು ಸುಪಾರಿ ಕಿಲ್ಲರ್‌ಗಳ ಕ್ರೈಂ ಸ್ಟೋರಿ





ಉದ್ಯಮಿಯೊಬ್ಬರ ಕೊಲೆ ಮಾಡಲು ಬಂದ ಸುಪಾರಿ ಕಿಲ್ಲರ್‌ಗಳು ಮಾಡಿದ್ದೇ ಬೇರೆ... ಸ್ಟಾರ್ ಹೊಟೇಲ್‌ಗೆ ಆಗಮಿಸಿದ ಅವರು ಅಲ್ಲಿನ ಮಹಿಳಾ ಸಿಬ್ಬಂದಿಯನ್ನು ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾರೆ. ಈ ಘಟನೆ ನಡೆದಿರುವುದ ರಾಜಸ್ತಾನದ ನೀಮಾನಾ ಎಂಬಲ್ಲಿ.


ಉದ್ಯಮಿಯೊಬ್ಬರ ಕೊಲೆ ಸಂಚು ರೂಪಿಸಲು ಐವರು ದುಷ್ಕರ್ಮಿಗಳು ಇಲ್ಲಿನ ಐಷಾರಾಮಿ ಹೊಟೇಲ್‌ಗೆ ಆಗಮಿಸುತ್ತಾರೆ. ಅಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆಯುತ್ತಾರೆ. 


ರೂಂ ಕೀ ಪಡೆದುಕೊಂಡು ಒಳಸೇರಿದ ಅವರು, ರಿಸಪ್ಶನ್‌ಗೆ ಕರೆ ಮಾಡಿ ಕಾಲ್‌ ಗರ್ಲ್‌ನ್ನು ಕಳುಹಿಸಿಕೊಡುವಂತೆ ಸೂಚಿಸುತ್ತಾರೆ. ಇಲ್ಲಿ ಅಂತಹ ಸೇವೆ ಇಲ್ಲ ಎಂದು ರಿಸಪ್ಶನ್ ಸ್ಟಾಫ್ ಖಡಕ್ ಆಗಿ ಹೇಳಿಬಿಡುತ್ತಾರೆ.


ಇದರಿಂದ ಆಕ್ರೋಶಗೊಂಡ ಈ ದುಷ್ಕರ್ಮಿಗಳ ಪಡೆ ಮಹಿಳಾ ಸಿಬ್ಬಂದಿಯ ರೆಸ್ಟ್ ರೂಂಗೆ ನುಗ್ಗಿ ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಾರೆ. ಗನ್ ತೋರಿಸಿ ಈ ಹೀನ ಕೃತ್ಯ ನಡೆಸುತ್ತಾರೆ.

ಈ ಮಧ್ಯೆ, ಹೊಟೇಲ್ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸುತ್ತಾರೆ.


ತಕ್ಷಣ ಹೊಟೇಲ್‌ಗೆ ಆಗಮಿಸಿದ ಪೊಲೀಸರು ಇಬ್ಬರು ಮಹಿಳೆಯರನ್ನು ರಕ್ಷಿಸಿ ದುಷ್ಕರ್ಮಿಗಳ ತಂಡವನ್ನು ಬಂಧಿಸುತ್ತಾರೆ. ನರೇಶ್ ಗುಜ್ಜರ್, ಲೋಕೇಶ್, ರಾಹುಲ್, ದನ್ವೇರ್ ಮತ್ತು ಪ್ರಿನ್ಸ್ ತಿವಾರಿ ಬಂಧಿತ ಆರೋಪಿಗಳು.


ಬಂಧಿತರ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಮತ್ತೊಂದು ಸ್ಫೋಟಕ ಮಾಹಿತಿ ತಿಳಿಯುತ್ತದೆ. ಅದೇನೆಂದರೆ, ಅವರು ಬಂದಿರುವುದು ಉದ್ಯಮಿಯೊಬ್ಬರ ಕೊಲೆಗೆ... ಇದಕ್ಕಾಗಿ ಈ ಪಾಪಿಗಳ ತಂಡ 20 ಲಕ್ಷ ರೂ.ಗಳ ಸುಪಾರಿಯನ್ನು ಪಡೆದಿದೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.