-->

DK all set to G.P. Election 2020 | ಮೊದಲನೇ ಹಂತದ ಗ್ರಾ.ಪಂ. ಚುನಾವಣೆಗೆ ದಕ್ಷಿಣ ಕನ್ನಡ ಸಜ್ಜು; ಮತದಾನಕ್ಕೆ ಸಕಲ ಸಿದ್ಧತೆ

DK all set to G.P. Election 2020 | ಮೊದಲನೇ ಹಂತದ ಗ್ರಾ.ಪಂ. ಚುನಾವಣೆಗೆ ದಕ್ಷಿಣ ಕನ್ನಡ ಸಜ್ಜು; ಮತದಾನಕ್ಕೆ ಸಕಲ ಸಿದ್ಧತೆ



ಮಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಮೊದಲ ಹಂತದ ಚುನಾವಣೆಗೆ ದಕ್ಷಿಣ ಕನ್ನಡ ಸಜ್ಜಾಗಿದೆ. ಜಿಲ್ಲೆಯ 106 ಗ್ರಾಮ ಪಂಚಾಯತ್‌ಗಳ 1631 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 3854 ಹಿರಿಯಾಳುಗಳು ಕಣದಲ್ಲಿ ಇದ್ದಾರೆ.

ಇದೇ ವೇಳೆ, ಎರಡನೇ ಸುತ್ತಿನ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ಕಾರ್ಯ ನಡೆಯುತ್ತಿದೆ.


ಮಂಗಳೂರು ತಾಲೂಕಿಗೆ ಸೇರಿದ 37, ಮೂಡಬಿದಿರೆಯ 12, ಬಂಟ್ವಾಳದ 57 ಗ್ರಾಮ ಪಂಚಾಯತ್‌ನ 1681 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ, 50 ಸ್ಥಾನಗಳಿಗೆ ಎದುರಾಳಿಗಳು ಇಲ್ಲದೆ ಅವಿರೋಧ ಆಯ್ಕೆಯಾಗಿದೆ. ಈ ಕಾರಣ 1681 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ.


ಅನುಸೂಚಿತ ಜಾತಿಯ 238, ಅನುಸೂಚಿತ ಪಂಗಡದ 215 ಹಾಗೂ ಹಿಂದುಳಿದ ಅ ವರ್ಗದ 958, ಹಿಂದುಳಿದ ಬಿ ವರ್ಗದ 226 ಸಾಮಾನ್ಯ 2217 ಸೇರಿದಂತೆ ಒಟ್ಟು 3854 ಅಭ್ಯರ್ಥಿಗಳು ಆಯ್ಕೆ ಬಯಸಿ ಚುನಾವಣಾ ಕಣದಲ್ಲಿ ಇದ್ದಾರೆ.


ಮಂಗಳೂರಿನಲ್ಲಿ ಒಟ್ಟು 2,13,896 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಈ ಪೈಕಿ 1.03 ಲಕ್ಷ ಪುರುಷರು ಮತ್ತು 1.10 ಲಕ್ಷ ಮಹಿಳೆಯರು ಮತದಾನದ ಹಕ್ಕನ್ನು ಹೊಂದಿದ್ದಾರೆ.


ಬಂಟ್ವಾಳದಲ್ಲಿ ಸುಮಾರು ಎರಡು ಲಕ್ಷ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 

Ads on article

Advertise in articles 1

advertising articles 2

Advertise under the article